Advertisement

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಎರಡನೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ

08:08 PM Nov 11, 2021 | Team Udayavani |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಟ್ವಿಟರ್‌ನಲ್ಲಿ ಪ್ರಸಕ್ತ ವರ್ಷದ ಎರಡನೇ ಅತಿ ಪ್ರಭಾವಿ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ‌ ಗ್ರಾಹಕ ಬೌದ್ಧಿಕ ಸಮೀಕ್ಷಾ ಸಂಸ್ಥೆಯಾದ ಬ್ರಾಂಡ್‌ವಾಚ್‌, ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಜಾಗತಿಕ ವ್ಯಕ್ತಿಗಳ ಬಗ್ಗೆ ಸಮೀಕ್ಷೆ ನಡೆಸಿ, ಟ್ವಿಟರ್‌ನ ಮೂಲಕ ಜನಸಾಮಾನ್ಯರ ಮೇಲೆ ಪ್ರಭಾವ ಬೀರುವಂಥ ವಿಶ್ವದ 50 ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿದೆ. ಶೇ. 70ರಷ್ಟು ಜನರು ಇವರನ್ನು, ಇವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿರುವುದಾಗಿ ಆ ಸಮೀûಾ ವರದಿಯಲ್ಲಿ ಹೇಳಲಾಗಿತ್ತು. ಅದರ ಬೆನ್ನಲ್ಲೇ, ಟ್ವಿಟರ್‌ನಲ್ಲೂ ಅವರು ಹೆಚ್ಚು ಪ್ರಭಾವಿ ಎಂಬ ವಿಚಾರ ಪ್ರಕಟವಾಗಿದೆ.

Advertisement

ಟ್ವಿಟರ್‌ನ ಪ್ರಭಾವಿಗಳ ಪಟ್ಟಿ ವಿಚಾರಕ್ಕೆ ಬರುವುದಾದರೆ, ಮೋದಿಯವರು ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಜೊ ಬೈಡನ್‌, ಯು.ಕೆ. ಪ್ರಧಾನಿ ಬೋರಿಸ್‌ ಜಾನ್ಸನ್‌, ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರಾಡ್ಯು ಹಾಗೂ ಜರ್ಮನಿಯ ಪ್ರಧಾನಿ ಏಂಜೆಲಾ ಮಾರ್ಕೆಲ್‌ ಅವರನ್ನು ಹಿಂದಿಕ್ಕಿದ್ದಾರೆ.

@narendramodi ಎಂಬ ಟ್ವಿಟರ್‌ ಹ್ಯಾಂಡಲ್‌ನಡಿ ಟ್ವೀಟ್‌ ಮಾಡುವ ಮೋದಿ, ಈವರೆಗೆ 7.25 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

35ನೇ ಸ್ಥಾನದಲ್ಲಿ ಸಚಿನ್‌
ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೂಬ್ಬ ಭಾರತೀಯರೆಂದರೆ ಅವರು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌. ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕರೂ ಆಗಿರುವ ಅವರು ಪಟ್ಟಿಯ 35ನೇ ಸ್ಥಾನದಲ್ಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಅವರು, 2013ರಿಂದ ದಕ್ಷಿಣ ಏಷ್ಯಾದಲ್ಲಿ ಯೂನಿಸೆಫ್ನ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಮುಂಬಯಿ : 6 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಹಿತ ನೈಜೀರಿಯನ್ ಪ್ರಜೆಯ ಬಂಧನ

Advertisement

ಟ್ವಿಟರ್‌ನ ಟಾಪ್‌ 10 ಪ್ರಭಾವಿ ವ್ಯಕ್ತಿಗಳು
1. ಟೇಲರ್‌ ಸ್ವಿಫ್ಟ್ ಅಮೆರಿಕ ಪಾಪ್‌ ಗಾಯಕಿ
2. ನರೇಂದ್ರ ಮೋದಿ ಭಾರತ ಪ್ರಧಾನಿ
3. ಕ್ಯಾಟಿ ಪೆರ್ರಿ ಅಮೆರಿಕ ಪಾಪ್‌ ಗಾಯಕಿ
4. ಎಲಾನ್‌ ಮಸ್ಕ್ ಅಮೆರಿಕ ಉದ್ಯಮಿ
5. ಬರಾಕ್‌ ಒಬಾಮ ಅಮೆರಿಕ ಮಾಜಿ ರಾಷ್ಟ್ರಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next