ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಡಿ.21) ಎರಡು ದಿನಗಳ ಭೇಟಿಗಾಗಿ ಕುವೈತ್‌ಗೆ ಪ್ರಯಾಣಿಸಿದ್ದಾರೆ, ಇದು 43 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ನೀಡುವ ಮೊದಲ ಭೇಟಿಯಾಗಿದೆ.
ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಇಂದು(ಶನಿವಾರ) ಬೆಳಿಗ್ಗೆ ೯:೧೫ಕ್ಕೆ ಪ್ರಧಾನಿ ಮೋದಿ ಕುವೈತ್ ಗೆ ಪ್ರಯಾಣ ಬೆಳೆಸಿದ್ದಾರೆ.
43 ವರ್ಷಗಳ ಹಿಂದೆ ಅಂದರೆ 1981ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು ಇದಾದ ಬಳಿಕ 2009ರಲ್ಲಿ ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪಶ್ಚಿಮ ಏಷ್ಯಾ ದೇಶಕ್ಕೆ ಭೇಟಿ ನೀಡಿದ್ದರು. ಬಳಿಕ ೨೦೧೩ರಲ್ಲಿ ಕುವೈತ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದರು, ಇಂದಿರಾಗಾಂಧಿ ಕುವೈತ್ ಭೇಟಿ ಬಳಿಕ ನಲ್ವತ್ತಮೂರು ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿ ಭೇಟಿ ನೀಡುತ್ತಿರುವುದು ವಿಶೇಷ.
ಹೀಗಿದೆ ಪ್ರಧಾನಿ ವೇಳಾಪಟ್ಟಿ:
ಪ್ರಧಾನಿ ಮೋದಿಯವರು ದೆಹಲಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.15ಕ್ಕೆ ಹೊರಟು 11.35ಕ್ಕೆ ಕುವೈತ್ ತಲುಪಲಿದ್ದಾರೆ. ಇದಾದ ಮಧ್ಯಾಹ್ನ 2:50 ಕ್ಕೆ ಸ್ಥಳೀಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಗಲ್ಫ್ ಸ್ಪಿಕ್ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಸಂಜೆ ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಸಮುದಾಯ ಕಾರ್ಯಕ್ರಮ ನಡೆಯಲಿದ್ದು ಅಲ್ಲಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಗಾಲ್ಫ್ ಕಪ್ ಫುಟ್ಬಾಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಭಾನುವಾರ ಮೋದಿ ಅವರು ಕುವೈತ್ ಎಮಿರ್ ಮತ್ತು ಕ್ರೌನ್ ಪ್ರಿನ್ಸ್ ಅವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದಾರೆ. ಈ ವೇಳೆ ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳ ವ್ಯಾಪ್ತಿಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಬಳಿಕ ಕುವೈತ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನು ಮೋದಿ ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ