Advertisement

ಕಲಾಪ ಭಂಗ: ಪಿಎಂ ಮೋದಿ ನೇತೃತ್ವದಲ್ಲಿ ಉಪವಾಸ

06:00 AM Apr 13, 2018 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಎರಡನೇ ಭಾಗದಲ್ಲಿ ಕಲಾಪ ನಡೆಸಲು ಕಾಂಗ್ರೆಸ್‌ ಅಡ್ಡಿಪಡಿಸಿದ್ದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸಂಸದರು, ನಾಯಕರು ಗುರುವಾರ ಒಂದು ದಿನದ ಉಪವಾಸ ಕೈಗೊಂಡರು.

Advertisement

ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ವಿಶೇಷ ವಿಮಾನದಲ್ಲಿ ಬೆಳಗ್ಗೆ 8.30ಕ್ಕೆ ತೆರಳಿದರು. ಅಧಿಕೃತ ನಿವಾಸದಿಂದ ಹೊರಡುವ ಮುನ್ನ ಅವರು ಏನನ್ನೂ ಸೇವಿಸಲಿಲ್ಲ. ಚೆನ್ನೈ ಸಮೀಪ ರಕ್ಷಣಾ ವಸ್ತು ಪ್ರದರ್ಶನ ಉದ್ಘಾಟಿಸಿದ ಬಳಿಕ, ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.  ಸಂಜೆಯ ವೇಳೆಗೆ ನವದೆಹಲಿಗೆ ವಾಪಸಾಗಿದ್ದಾರೆ.

ಇದೇ ವೇಳೆ, ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಲಾಪ ನಡೆಯದೇ ಇರಲು ಕಾಂಗ್ರೆಸ್‌ ಕಾರಣ ಎಂದು ದೂರಿದ್ದಾರೆ. ಕಲಾಪಕ್ಕೆ ಅಡ್ಡಿ ತರುವುದೇ ಪ್ರತಿಪಕ್ಷಗಳ ಆದ್ಯತೆಯಾಗಿತ್ತೇ ಹೊರತು, ಜನರ ಯೋಗ ಕ್ಷೇಮವಲ್ಲ ಎಂದಿದ್ದಾರೆ. ಜನರು ತಮ್ಮ ಪ್ರತಿನಿಧಿಗಳ ನ್ನಾಗಿ ಯಾರನ್ನು ಕಳುಹಿಸಿಕೊಟ್ಟಿದ್ದಾರೆಯೋ ಅವರು ಎಂಥ ಕೆಲಸ ಮಾಡಿದ್ದಾರೆ ಎಂದು ತಿಳಿದು ಕೊಳ್ಳಬೇಕು ಎಂದು ಬ್ಲಾಗ್‌ನಲ್ಲಿ ಉಲ್ಲೇಖೀಸಿದ್ದಾರೆ.

ಗುಜರಾತ್‌, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ನಾಯಕರು ಉಪವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ನಡುವೆ ಪ್ರಧಾನಿ ಮೋದಿಯವರ ಉಪವಾಸ ಕಾರ್ಯಕ್ರಮದ ಬಗ್ಗೆ ಲೇವಡಿ ಮಾಡಿದ ಕಾಂಗ್ರೆಸ್‌ ನಾಯಕ ಆನಂದ ಶರ್ಮಾ ಮತ್ತೂಮ್ಮೆ ಸಂಸತ್‌ ಅಧಿವೇಶನ ಕರೆಯುವಂತೆ ಆಗ್ರಹಿಸಿದ್ದಾರೆ. ಬಿಜೆಪಿಯೇ ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಲು ಕುಮ್ಮಕ್ಕು ನೀಡಿತ್ತು ಎಂದು ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next