Advertisement
ಕಳೆದ ವರ್ಷ ಜಿ-20 ಶೃಂಗಸಭೆಯ ಸಾರಥ್ಯವನ್ನು ಭಾರತದ ವಹಿಸಿದ್ದ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಿಯೋಜಿಸಿದ್ದ ಬಿಗಿ ಭದ್ರತೆಯಂತೆಯೇ ಮೋದಿ ಪ್ರಮಾಣವಚನ ಸಮಾರಂಭಕ್ಕೂ ನಿಯೋಜಿಸಲಾಗಿದೆ. ಸಾರ್ಕ್ ರಾಷ್ಟ್ರಗಳ ಗಣ್ಯರು ಸೇರಿದಂತೆ ವಿದೇಶಗಳ ಪ್ರಖ್ಯಾತ ನಾಯಕರು ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹ್ವಾನಿತರು ಉಳಿದುಕೊಂಡಿರುವ ಹೋಟೆಲ್‌ಗಳಿಂದ ಸಮಾರಂಭ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಲು ನಿಗದಿತ ಮಾರ್ಗಗಳನ್ನು ಸೂಚಿಸಲಾಗಿದೆ.
ಪದಗ್ರಹಣ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೆಯುವುದರಿಂದ ಭವನದ ಹೊರಗೂ, ಒಳಗೂ 3 ಹಂತದ ಭದ್ರತೆ ನಿಯೋಜಿಸಲಾಗಿದ್ದು, ವಿಶೇಷ ಶಸ್ತ್ರಾಸ್ತ್ರಗಳನ್ನು ಒಳಗೊಂಡ ದೆಹಲಿ ಪೊಲೀಸರ ತಂಡದ ಜತೆಗೆ ಎನ್‌ಎಸ್‌ಜಿ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ವಹಿಸಲಿದ್ದಾರೆ. ಭವನದ ಸುತ್ತಾ 2,500 ಪೊಲೀಸರು ಭದ್ರತೆ ಒದಗಿಸಲಿದ್ದಾರೆ.
Related Articles
-ಗಣ್ಯರು ಆಗಮಿಸುವ ಮತ್ತು ಉಳಿದುಕೊಂಡಿರುವ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸರ ನಿಯೋಜನೆ
-ತಾಜ್, ಲೀಲಾ, ಐಟಿಸಿ ಮೌರ್ಯ ಸೇರಿ ಗಣ್ಯರು ಉಳಿಯಲಿರುವ ಪ್ರಖ್ಯಾತ ಹೋಟೆಲ್‌ಗಳಿಗೂ ಭದ್ರತೆ
-ನಗರದ ಪ್ರಮುಖ ಸ್ಥಳಗಳು ಕಣ್ಗಾವಲಿಗೆ ಡ್ರೋನ್‌ಗಳ ಬಳಕೆ, ಎತ್ತರದ ಕಟ್ಟಡಗಳ ಮೇಲೆ ಸ್ನೆ„ಪರ್
-ರಾಜಧಾನಿಯ ಪ್ರಮುಖ ಸ್ಥಳಗಳಿಗೆ ಆಗಮಿಸುವ ಎಲ್ಲರ ಮುಖ ಗುರುತಿಸಲು ಎಐ ಸ್ಕ್ಯಾನಿಂಗ್ ಡಿವೈಸ್
-ಕೇಂದ್ರ ದೆಹಲಿಗೆ ಸಂಪರ್ಕಿಸುವ ಹಲವು ರಸ್ತೆಗಳಿಗೆ ನಿರ್ಬಂಧ, ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ತಪಾಸಣೆ
Advertisement