Advertisement

ಬಿಷ್‌ಕೆಕ್‌ ನಲ್ಲಿ ಪ್ರಧಾನಿ ಮೋದಿ, ಚೀನ ಅಧ್ಯಕ್ಷ ಕ್ಸಿ ಭೇಟಿ; ದ್ವಿಪಕ್ಷೀಯ ಸಂಬಂಧ ವರ್ಧನೆ

10:04 AM Jun 14, 2019 | Sathish malya |

ಬಿಷ್‌ಕೆಕ್‌, ಕಿರ್ಗಿಸ್ಥಾನ್‌ : ಇಲ್ಲೀಗ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಓ) ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು.

Advertisement

ನರೇಂದ್ರ ಮೋದಿ ಅವರು ಕಳೆದ ತಿಂಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಭಾರತದ ಪ್ರಧಾನಿಯಾಗಿ ಪುನರಾಯ್ಕೆಯಾದ ಬಳಿಕದಲ್ಲಿ ಉಭಯ ನಾಯಕರೊಳಗೆ ನಡೆಯುತ್ತಿರುವ ಮೊದಲ ಭೇಟಿ ಇದಾಗಿದೆ.

ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಮಾಡಿರುವ ಟ್ವೀಟ್‌ ನಲ್ಲಿ “ಚೀನದೊಂದಿಗಿನ ಮೈತ್ರಿ ಬಾಂಧವ್ಯವನ್ನು ಇನ್ನಷ್ಟು ಆಳಕ್ಕೆ ಒಯ್ಯಲಾಗುತ್ತಿದೆ. ಎಸ್‌ಸಿಓ ಶೃಂಗದ ಪಾರ್ಶ್ವದಲ್ಲಿ ಚೀನ ಅಧ್ಯಕ್ಷರೊಂದಿಗಿನ ಮೊದಲ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ; ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಉಭಯ ನಾಯಕರ ಚರ್ಚೆ’ ಎಂದು ತಿಳಿಸಲಾಗಿದೆ.

ಈ ಭೇಟಿಗೆ ಮುನ್ನವೇ ಚೀನ, ಅಧ್ಯಕ್ಷ ಕ್ಸಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ಸಂರಕ್ಷಣೆ ಮತ್ತು ಏಕಪಕ್ಷೀಯ ಸುಂಕವನ್ನು ಅಸ್ತ್ರವಾಗಿ ಬಳಸುವ ನೀತಿಯ ವಿರುದ್ದ ಒಗ್ಗೂಡಿ ಹೋರಾಡುವ ಅಗತ್ಯಕ್ಕೆ ಒತ್ತು ನೀಡಲಿದ್ದಾರೆ ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next