ನವದೆಹಲಿ: ಕೋವಿಡ್ ಲಸಿಕೆ ವಿತರಣೆ ಪ್ರಮಾಣ ತೃಪ್ತಿದಾಯಕವಾಗಿಲ್ಲದ ಸುಮಾರು 40 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನ.3ರಂದು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ.
ಮೊದಲ ಡೋಸ್ ಲಸಿಕೆ ವಿತರಣೆ ಶೇ.50ಕ್ಕಿಂತಲೂ ಕಡಿಮೆಯಿರುವ ಮತ್ತು ಎರಡನೇ ಡೋಸ್‌ನಲ್ಲೂ ಉತ್ತಮ ಸಾಧನೆ ಮಾಡದಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ 11 ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮನೆ ಬಾಗಿಲಿಗೆ ಲಸಿಕೆ ನೀಡುವ ಕೇಂದ್ರ ಸರ್ಕಾರದ ಹೊಸ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನುಷ್ಠಾನಗೊಳಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ 51 ಲಕ್ಷ, ಗುಜರಾತ್‌ನಲ್ಲಿ 42 ಲಕ್ಷ, ಛತ್ತೀಸ್‌ಗಡ 39.95 ಲಕ್ಷ, ತೆಲಂಗಾಣದಲ್ಲಿ 36.6 ಲಕ್ಷ, ಪಶ್ಚಿಮ ಬಂಗಾಳದಲ್ಲಿ 36.16 ಲಕ್ಷ, ಒಡಿಶಾದಲ್ಲಿ 33 ಲಕ್ಷ, ಹರ್ಯಾಣ 27 ಲಕ್ಷ, ಪಂಜಾಬ್‌ನಲ್ಲಿ 26.4 ಲಕ್ಷ, ಕೇರಳದಲ್ಲಿ 25 ಲಕ್ಷ, ಅಸ್ಸಾಂನಲ್ಲಿ 21 ಲಕ್ಷ, ಮಧ್ಯಪ್ರದೇಶದಲ್ಲಿ 1.10 ಕೋಟಿ, ರಾಜಸ್ಥಾನದಲ್ಲಿ 86 ಲಕ್ಷ, ಮಹಾರಾಷ್ಟ್ರದಲ್ಲಿ 76 ಲಕ್ಷ, ಬಿಹಾರದಲ್ಲಿ 72 ಲಕ್ಷ, ತಮಿಳುನಾಡಿನಲ್ಲಿ 60 ಲಕ್ಷ ಮಂದಿ ಇನ್ನೂ 2ನೇ ಡೋಸ್ ಪಡೆಯಬೇಕಾಗಿದೆ.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ಗೆ ಚೆನ್ನೈ ಜೆರ್ಸಿ ಗೌರವ