Advertisement

New Parliament building ಅಧೀನರನ್ನು ಭೇಟಿಯಾದ ಪ್ರಧಾನಿ ಮೋದಿ

12:36 AM May 28, 2023 | Team Udayavani |

ಹೊಸದಿಲ್ಲಿ: ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮಿಳುನಾಡಿನ ವಿವಿಧ ಶಿವಭಕ್ತ ಸ್ವಾಮೀಜಿಗಳನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ಮುಂಜಾನೆ ತಮಿಳುನಾಡಿನಿಂದ ಆಗಮಿಸಿದ ಶಿವಭಕ್ತ ಅಧೀನರು ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಂತ್ರಗಳ ಪಠಣದ ನಡುವೆ ಸೆಂಗೋಲ್ ಸೇರಿದಂತೆ ವಿಶೇಷ ಉಡುಗೊರೆಗಳನ್ನು ನೀಡಿದರು.ಮೋದಿ ಅವರ ಆಶೀರ್ವಾದ ಪಡೆದು ಸನ್ಮಾನಿಸಿದರು.

“ಸೆಂಗೋಲನ್ನು ಹೊರತಂದಿದ್ದು ನಿಮ್ಮ ಸೇವಕ’

ಸೆಂಗೋಲ್‌ ರಾಜದಂಡಕ್ಕೆ ಸ್ವಾತಂತ್ರಾನಂತರ ಸೂಕ್ತ ಗೌರವ ನೀಡಿದ್ದರೆ ಒಳ್ಳೆಯದಿತ್ತು. ಆದರೆ ಅದನ್ನು ವಾಕಿಂಗ್‌ ಸ್ಟಿಕ್‌ ಎಂದು ಕರೆದು ಪ್ರಯಾಗ್‌ರಾಜ್‌ನ ಆನಂದ ಭವನದಲ್ಲಿ ಇಡಲಾಗಿತ್ತು. ನಿಮ್ಮ ಸೇವಕ, ನಮ್ಮ ಸರಕಾರ ಅದನ್ನು ಆನಂದಭವನದಿಂದ ಹೊರತಂದಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜದಂಡಕ್ಕೆ ಸೂಕ್ತ ಮರ್ಯಾದೆ ನೀಡದಿದ್ದರ ವಿರುದ್ಧ ಹರಿಹಾಯ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರದ ಮುಖ್ಯಸ್ಥೆಯಾಗಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸುವ ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೊಸ ಸಂಸತ್ತಿನ ಕಟ್ಟಡವನ್ನು ಪ್ರಧಾನಿ ಭಾನುವಾರ ಉದ್ಘಾಟಿಸಲಿದ್ದಾರೆ.

Advertisement

ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆ 8:30 ರಿಂದ 9 ರವರೆಗೆ ಹೊಸ ಸಂಸತ್ತಿನ ಲೋಕಸಭೆ ಚೇಂಬರ್‌ನಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಲಾಗುವುದು.

ಶುಕ್ರವಾರ, ಹೊಸ ಸಂಸತ್ತಿನ ಕಟ್ಟಡವು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತರುತ್ತದೆ ಎಂದು ಮೋದಿ ಹೇಳಿದರು ಮತ್ತು ಹೊಸ ಸಂಕೀರ್ಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next