ನವದೆಹಲಿ: “ಹವಾಮಾನ ವೈಪರಿತ್ಯ ವಿಚಾರದಲ್ಲಿ ಭಾರತ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ತಲುಪಿದ್ದಷ್ಟೇ ಅಲ್ಲ, ಅವುಗಳನ್ನೂ ಮೀರಿ ಕೆಲಸ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿ-20 ವರ್ಚುವಲ್ ಶೃಂಗದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, “ಭಾರತ ಕಡಿಮೆ ಇಂಗಾಲ ಮತ್ತು ವಾತಾವರಣ ಸ್ಥಿತಿಸ್ಥಾಪಕ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದೆ. ಅವನತಿ ಅಂಚಿನಲ್ಲಿರುವ 2.6 ಕೋಟಿ ಹೆಕ್ಟೇರ್ ಭೂಪ್ರದೇಶವನ್ನು 2030ರೊಳಗೆ ಮರಳಿ ಯೋಗ್ಯವಾಗಿಸುವ ಬೃಹತ್ ಗುರಿಯನ್ನು ಹೊಂದಿದೆ’ ಎಂದು ತಿಳಿಸಿದ್ದಾರೆ.
“ಹವಾಮಾನ ವೈಪರಿತ್ಯ ವಿರುದ್ಧ ವಿಶ್ವದ ಎಲ್ಲ ದೇಶಗಳೂ ಸಮಾನವಾಗಿ ಹೋರಾಡುವುದು ಮುಖ್ಯ. ಆದರೆ, ಈ ಹೋರಾಟ ಬೃಹತ್ ಪ್ರಮಾಣಕ್ಕಷ್ಟೇ ಸೀಮಿತವಾಗದೆ, ಸಮಗ್ರ, ವಿಸ್ತಾರ ಮತ್ತು ಸರ್ವಾಂಗೀಣ ಹಾದಿಯಲ್ಲಿ ಹವಾಮಾನದ ಸಮಸ್ಯೆಗಳಿಗೆ ಉತ್ತರ ನೀಡಬೇಕಾಗಿದೆ’ ಎಂದು ಕರೆನೀಡಿದ್ದಾರೆ.
ಇದನ್ನೂ ಓದಿ :ನೀರು ಕುಡಿಯಲು ಹೋಗಿ ತೊಟ್ಟಿಯೊಳಗೆ ಬಿದ್ದ ಕಾಡಾನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ
ಸೌದಿ ಅರೇಬಿಯಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗದಲ್ಲಿ ಅಮೆರಿಕ, ಚೀನಾ, ಟರ್ಕಿ, ಫ್ರಾನ್ಸ್, ಇಂಗ್ಲೆಂಡ್, ಬ್ರೆಜ್É ದೇಶಗಳು ಪಾಲ್ಗೊಂಡಿವೆ.