Advertisement
ಫೆ.17ರಿಂದ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ ಆರಂಭವಾಗಲಿದ್ದು, ಅಂದು 108 ಕಲಶಗಳ ಅಭಿಷೇಕ ಮಾತ್ರ ನಡೆಯಲಿದೆ. 18ರಿಂದ 1008 ಕಲಶಗಳ ಅಭಿಷೇಕ ದೊಂದಿಗೆ ಪೂರ್ಣ ಕಾರ್ಯಕ್ರಮ ಆರಂಭ ವಾಗಲಿದ್ದು, 19ಕ್ಕೆ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅವರು ಕೇಂದ್ರ ಪುರಾತತ್ವ ಇಲಾಖೆಯು ವಿಂಧ್ಯಾಗಿರಿ ಬೆಟ್ಟದಲ್ಲಿ ಡೋಲಿ ಹೊರುವ ವರಿಗಾಗಿ ಪ್ರತ್ಯೇಕವಾಗಿ ಕೆತ್ತಿಸಿರುವ ಮೆಟ್ಟಿಲುಗಳನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಶ್ರೀಮಠದ ವತಿಯಿಂದ ಶ್ರೀಧವಲತೀರ್ಥಂನಲ್ಲಿ ನಿರ್ಮಿಸಿರುವ 200 ಹಾಸಿಗೆಗಳ ಸಾಮರ್ಥ್ಯದ ಶ್ರೀ ಬಾಹುಬಲಿ ಜನರಲ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅನಂತರ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಫೆ. 18ರಂದು ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕಾರ್ಯಕ್ರಮ ಇನ್ನೂ ಅಂತಿಮವಾಗಿಲ್ಲ. ಫೆ.25ಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.