ಹೊಸದಿಲ್ಲಿ: ಅಮೆರಿಕದ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್‌ನ ವರದಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಮತ್ತೂಂದು ಸಂತಸದ ಸುದ್ದಿ. ಹೊಸ ದೊಂದು ಸಮೀಕ್ಷೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ವಿಶ್ವದ ಅತ್ಯಂತ ನಂಬಿಕಸ್ಥ ಸರಕಾರ ಎಂಬ ಹೆಗ್ಗಳಿಕೆ ಗಳಿಸಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಓಇಸಿಡಿ) ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.
“ಪ್ರಧಾನಿ ಮೋದಿ ವಿಶ್ವದ ಅತ್ಯಂತ ನಂಬಿಕಸ್ಥ ಸರಕಾರದ ನೇತೃತ್ವ ವಹಿಸಿದ್ದಾರೆ. ಭಾರತದ ಮುಕ್ಕಾಲು ಭಾಗ ಅಂದರೆ ಶೇ.74 ಮಂದಿ ಸದ್ಯ ಇರುವ ಸರಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದು ವರ್ಲ್ಡ್ ಇಕನಾಮಿಕ್ ಫೋರಂ (ಡಬ್ಲೂé ಇಎಫ್) ಈ ಸಮೀಕ್ಷೆಯನ್ನು ಉಲ್ಲೇಖೀಸಿ ಹೇಳಿದೆ. ನೋಟು ಅಮಾನ್ಯ, ಜಿಎಸ್‌ಟಿ ಜಾರಿ, ತೆರಿಗೆ ಸುಧಾರಣಾ ಕ್ರಮಗಳಿಂದಾಗಿ ಕೇಂದ್ರ ಸರಕಾರ ದೇಶದ ಜನರ ವಿಶ್ವಾಸ ಗಳಿಸಿಕೊಂಡಿದೆ ಎಂದು ಅದು ಹೇಳಿದೆ.
ಆದರೆ ದೇಶದ ಅರ್ಥ ವ್ಯವಸ್ಥೆಯ ಸ್ಥಿತಿ, ರಾಜಕೀಯ ಸ್ಥಿತ್ಯಂತರ ಅಥವಾ ಬೆಳವಣಿಗೆ ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿರುವ ಭ್ರಷ್ಟಾಚಾರ ಪ್ರಕರಣಗಳು ಸೇರಿದಂತೆ ಪ್ರಮುಖ ಬೆಳವಣಿಗೆಗಳ ವರದಿಯ ಬಗ್ಗೆ ಜನಾಭಿಪ್ರಾಯ ಒಳಗೊಂಡಿಲ್ಲ. ವರದಿ ಯಲ್ಲಿ, ಸ್ವಿಜರ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ.
ಇತ್ತೀಚಿನ ವರ್ಷಗಳ ವರೆಗೆ ದೇಶದ ಜನರು ಸರಕಾರ ಮತ್ತು ರಾಜಕಾರಣಿಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದರು. ಆದರೆ ಪ್ರಧಾನಿ ಮೋದಿ ಅವರ ನಾಯಕತ್ವ ಜನರಲ್ಲಿ ಮತ್ತೆ ನಂಬಿಕೆ ವೃದ್ಧಿಸುವಂತೆ ಮಾಡಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ.
– ಜೆ.ಪಿ.ನಡ್ಡಾ, ಕೇಂದ್ರ ಸಚಿವ