Advertisement

ಮಂಗಳೂರು ಸೇರಿ ರಾಜ್ಯದ 13 ರೈಲ್ವೇ ನಿಲ್ದಾಣಗಳು ಮೇಲ್ದರ್ಜೆಗೆ: ಪ್ರಧಾನಿ ಮೋದಿ ಚಾಲನೆ

01:23 PM Aug 06, 2023 | keerthan |

ಹೊಸದಿಲ್ಲಿ: ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿಯಲ್ಲಿ ಭಾರತದಾದ್ಯಂತ 508 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

Advertisement

ಕರ್ನಾಟಕದ ಮಂಗಳೂರು, ಅರಸೀಕೆರೆ, ಹರಿಹರ ಸೇರಿ 13 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.

“ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ತನ್ನ ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ. ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ” ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.

ಯೋಜನೆಯಡಿ ಮಂಗಳೂರಿನ ಪಡೀಲ್ ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ 19.32 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಯಾಗಲಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ  ವೇದವ್ಯಾಸ ಕಾಮತ್, ಡಾ| ವೈ ಭರತ್ ಶೆಟ್ಟಿ,  ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ‌ ಕೋಟ ಶ್ರೀ ನಿವಾಸ ಪೂಜಾರಿ, ಪ್ರತಾಪ ಸಿಂಹ ನಾಯಕ್,  ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಕಾರ್ಪೋರೇಟರ್ ಶೋಭಾ ಪೂಜಾರಿ, ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗದ ಡಿಆರ್ ಎಂ ಆರ್. ಮುಕುಂದ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಕೆ.ಪಿ.ರಾಯರು ನಮ್ಮ ನಡುವೆ ಇರುವ ಥಾಮಸ್‌ ಆಲ್ವ ಎಡಿಸನ್‌ ಇದ್ದಂತೆ: ಚಾರುಕೀರ್ತಿ ಮಹಾಸ್ವಾಮೀಜಿ

Advertisement

ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ 34.13 ಕೋಟಿ ರೂ. ಅನುದಾನದಲ್ಲಿ ಹಾಗೂ ಹರಿಹರದಲ್ಲಿ25.21 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೊತ್ತಿಗೊಳ್ಳಲಾಗುವುದು. ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಹೊಸ ನಿಲ್ದಾಣ ಕಟ್ಟಡ ನಿರ್ಮಾಣ, ಪ್ರವೇಶ ಮತ್ತು ನಿರ್ಗಮನ ಕಮಾನು, ಚರಂಡಿ ಮತ್ತು ಮಳೆ ನೀರು ಕೊಯ್ಲುವ್ಯವಸ್ಥೆ, ಪ್ಲಾಟ್‌ ಫಾಮ್‌ರ್‍ಗಳ ಅಂಚಿನಲ್ಲಿ ಟೈಲ್ಸ್‌ ಸೇರಿದಂತೆ 12 ಕಾಮಗಾರಿ ನಡೆಯಲಿದೆ. ಹರಿಹರದಲ್ಲಿಯೂ ಹೊಸ ಬುಕ್ಕಿಂಗ್‌ ಕಚೇರಿ ಮತ್ತು ವಿಶ್ರಾಂತಿ ಕೊಠಡಿಗಳ ನಿರ್ಮಾಣ, ಪ್ಲಾಟ್‌ಫಾಮ್‌ರ್‍ಗಳ ಉದ್ದಕ್ಕೂ ಚಾವಣಿ ಒದಗಿಸುವುದು ಸೇರಿದಂತೆ 12 ಕಾಮಗಾರಿಗಳು ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next