ನವದೆಹಲಿ: ಲೋಕಸಭೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ನಂತರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ರೈತರ ಹಾಗೂ ಗ್ರಾಮೀಣ ಭಾರತದ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಜೆಟ್ 2021: ಕೋವಿಡ್ ವಿರುದ್ಧ ಹೋರಾಟ, ಕೇಂದ್ರದಿಂದ ಆರೋಗ್ಯ ಕ್ಷೇತ್ರಕ್ಕೆ ಒತ್ತು
ಜನಸಾಮಾನ್ಯರ ಜೀವನಕ್ಕೆ ಅನುಕೂಲವಾಗುವ, ಉದ್ಯಮ, ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಬಜೆಟ್ ಇದಾಗಿದ್ದು, ಉತ್ತಮ ಬಜೆಟ್ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕೋವಿಡ್ 19 ಸೋಂಕಿನ ಕುರಿತು ಉದಾಹರಿಸಿದ ಪ್ರಧಾನಿ ಮೋದಿ, ದೇಶ ಸಂಕಷ್ಟ ಕಾಲದಲ್ಲಿರುವ ಸಂದರ್ಭದಲ್ಲಿ ಬಜೆಟ್ ಅನ್ನು ಮಂಡಿಸಲಾಗಿದೆ. 2021ನೇ ಸಾಲಿನ ಬಜೆಟ್ ದೇಶದ ಆತ್ಮವಿಶ್ವಾಸವನ್ನು ಪ್ರದರ್ಶಿಸಲಿದೆ. ಇದರೊಂದಿಗೆ ಜಗತ್ತಿನಲ್ಲಿ ಭಾರತದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಳವಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
2021-22ನೇ ಸಾಲಿನ ಬಜೆಟ್ ನಲ್ಲಿ ಅಭಿವೃದ್ಧಿ ಕುರಿತು ಹೆಚ್ಚಿನ ಒತ್ತು ನೀಡಿದೆ. ಈ ಬಜೆಟ್ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ಬಜೆಟ್ ಗೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.