Advertisement

ಪಿಎಂ ಮೋದಿ ಜಗತ್ತಿನ ಜನಪ್ರಿಯ ನಾಯಕ; ಅಮೆರಿಕದ ಅಧ್ಯಕ್ಷರಿಗಿಂತಲೂ ಹೆಚ್ಚಿನ ಜನಪ್ರಿಯತೆ

11:38 AM Aug 27, 2022 | Team Udayavani |

ನವದೆಹಲಿ: ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಯಾರು? ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಎಂದರೆ ನಿಮ್ಮ ಉತ್ತರ ತಪ್ಪು. ಅಧ್ಯಕ್ಷ ಬೈಡೆನ್‌, ಅಷ್ಟೇ ಏಕೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರನ್ನು ಮೀರಿಸಿ, ಪ್ರಧಾನಿ ನರೇಂದ್ರ ಮೋದಿ ಶೇ.75 ಮಂದಿಯ ಮೆಚ್ಚುಗೆ ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ.

Advertisement

ಅಮರಿಕದ ಅಧ್ಯಕ್ಷ ಜೋ ಬೈಡೆನ್‌, ಕೆನಡಾ ಪ್ರಧಾನಿ ಜಸ್ಟಿನ್‌ ತ್ರುದೌ ಪಟ್ಟಿಯಲ್ಲಿ ಕ್ರಮವಾಗಿ 11, 12ನೇ ಸ್ಥಾನದಲ್ಲಿದ್ದಾರೆ.

ಅಮೆರಿಕದ ಸಮೀಕ್ಷಾ ಸಂಸ್ಥೆ ಮಾರ್ನಿಂಗ್‌ ಕನ್ಸಲ್ಟ್ ಆ.17ರಿಂದ ಆ.23ರ ನಡೆವೆ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಮೆಕೊÕàಕೋದ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯುವೆಲ್‌ ಲೋಪೆಜ್‌ ಒಬ್ರಡಾರ್‌ ಶೇ.63, ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಶೇ.58 ಮತಗಳನ್ನು ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ 20ನೇ ಸ್ಥಾನ (ಶೇ.22), ಜಪಾನ್‌ ಪ್ರಧಾನಿ 9ನೇ ಸ್ಥಾನ (ಶೇ.38)ದಲ್ಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಮೋದಿ ಜನಪ್ರಿಯತೆಗೆ ಕಾರಣ ಏನು?
– ಕೊರೊನಾ ಸೋಂಕಿನ 2ನೇ ಅಲೆಯ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ.
– ದೇಶದಲ್ಲಿನ ಶೇ.72 ಮಂದಿಯ ಪ್ರಕಾರ ಪ್ರಧಾನಿ ಮೋದಿ ಅವರು ದೇಶವನ್ನು ಸರಿಯಾದ ರೀತಿಯನ್ನು ಮುನ್ನಡೆಸುತ್ತಿದ್ದಾರೆ.
– ಜನರ ಮನಸ್ಸಿನಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ.
– 2020ರ ಏಪ್ರಿಲ್‌ನಲ್ಲಿ ಅವರ ಜನಪ್ರಿಯತೆ ಪ್ರಮಾಣ ಶೇ.83ಕ್ಕೆ ಏರಿಕೆಯಾಗಿತ್ತು.

Advertisement

ಜನಪ್ರಿಯ ನಾಯಕರ ಪಟ್ಟಿ
ಸಂಖ್ಯೆ ಹೆಸರು ದೇಶ ಜನಪ್ರಿಯತೆ ಪ್ರಮಾಣ (ಶೇಕಡಾವಾರು)
1. ನರೇಂದ್ರ ಮೋದಿ – ಭಾರತ- 75
2. ಆ್ಯಂಡ್ರೆಸ್‌ ಮಾನ್ಯುವೆಲ್‌ ಲೋಪೆಸ್‌ ಒಬ್ರಡಾರ್‌-ಮೆಕ್ಸಿಕೋ- 63
3. ಆ್ಯಂಟನಿ ಆಲ್ಬನೀಸ್‌- ಆಸ್ಟ್ರೇಲಿಯಾ- 58
4. ಇಗ್ನಾಜಿಯೋ ಕಾಸಿಸ್‌-ಸ್ವಿಜರ್ಲೆಂಡ್‌- 52
5. ಮರಿಯೋ ದ್ರಾಗಿ- ಇಟೆಲಿ- 54
6. ಮ್ಯಾಗ್ಡಲೇನಾ ಆ್ಯಂಡರ್ಸನ್‌-ಸ್ವೀಡನ್‌- 50
7.ಅಲೆಕ್ಸಾಂಡರ್‌ ಡೆ ಕ್ರೂ-ಬೆಲ್ಜಿಯಂ- 43
8. ಜೈರ್‌ ಬೋಲ್ಸ್‌ನಾರೋ- ಬ್ರೆಜಿಲ್‌- 42
9. ಫ್ಯೂಮಿಯೋ ಕಿಶಿದಾ-ಜಪಾನ್‌- 38
10. ಮೈಕೆಲ್‌ ಮಾರ್ಟಿನ್‌-ಐರ್ಲೆಂಡ್‌-39
11. ಜೋ ಬೈಡೆನ್‌- ಅಮೆರಿಕ- 41
12. ಜಸ್ಟಿನ್‌ ತ್ರುದೌ- ಕೆನಡಾ- 39
13. ಇಮ್ಯಾನ್ಯುವೆಲ್‌ ಮ್ಯಾಕ್ರನ್‌- ಫ್ರಾನ್ಸ್‌-34
14. ಪೆಡ್ರೋ ಸಾನ್‌ಚೆಜ್‌- ಸ್ಪೇನ್‌-34
15. ಜೋನಸ್‌ ಗಾರ್‌ ಸ್ಟೋರ್‌- ನಾರ್ವೆ- 30
16. ಒಲಾಫ್ ಶೋಲ್ಜ್-ಜರ್ಮನಿ- 30
17. ಕಾರ್ಲ್ ನೆಹಮ್ಮರ್‌-ಆಸ್ಟ್ರಿಯಾ-28
18. ಮೆಟ್ಯುವೆಜ್‌ ಮೋರ್ವಿಕ್‌- ಪೋಲಂಡ್‌- 26
19. ಮಾರ್ಕ್‌ ರಟ್ಟೆ- ನೆದರ್ಲೆಂಡ್‌- 27
20. ಬೋರಿಸ್‌ ಜಾನ್ಸನ್‌- ಯು.ಕೆ.- 25
21. ಪೇಟರ್‌ ಫಿಯಾಲಾ (ಚೆಕ್‌ ರಿಪಬ್ಲಿಕ್‌)-22
22. ಯೂನ್‌ ಸಿಯೋಕ್‌-ಯೋಲ್‌- ದಕ್ಷಿಣ ಕೊರಿಯಾ-21

Advertisement

Udayavani is now on Telegram. Click here to join our channel and stay updated with the latest news.

Next