Advertisement

ಪ್ರಧಾನಿ ಮೋದಿ ಆಧುನಿಕ ಭಾರತದ ಸ್ವಾಮಿ ವಿವೇಕಾನಂದ: ಬಂಗಾಳ ಸಂಸದ

08:02 PM Jan 12, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು “ಸ್ವಾಮಿ ವಿವೇಕಾನಂದರ ಇಂದಿನ ಅವತಾರ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಬಣ್ಣಿಸಿದ್ದಾರೆ.

Advertisement

ವಿವೇಕಾನಂದರಂತೆ ಪ್ರಧಾನಿ ಮೋದಿಯವರು ತಮ್ಮ ಕೆಲಸದ ಮೂಲಕ ತಾಯ್ನಾಡಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಸೌಮಿತ್ರಾ ಪ್ರತಿಪಾದಿಸಿದ್ದಾರೆ.

ಗುರುವಾರ, ಸ್ವಾಮಿ ವಿವೇಕಾನಂದರ 161 ನೇ ಜನ್ಮ ವಾರ್ಷಿಕೋತ್ಸವ, ಪಶ್ಚಿಮ ಬಂಗಾಳದಾದ್ಯಂತ ವರ್ಣರಂಜಿತ ಕಾರ್ಯಕ್ರಮಗಳು ನಡೆದವು.

ಪ್ರಧಾನಿ ನರೇಂದ್ರ ಮೋದಿ ಹೊಸ ರೂಪದಲ್ಲಿ ಸ್ವಾಮಿ ವಿವೇಕಾನಂದರ ಪುನರ್ಜನ್ಮ. ಸ್ವಾಮಿ ವಿವೇಕಾನಂದರು ನಮಗೆ ದೇವರಂತಹ ವ್ಯಕ್ತಿ. ಪ್ರಧಾನಿ ಮೋದಿಯವರು ದೇಶ ಮತ್ತು ಜನತೆಗೆ ಸೇವೆ ಸಲ್ಲಿಸುತ್ತಿರುವ ರೀತಿ ನೋಡಿದರೆ ಅವರು ಆಧುನಿಕ ಭಾರತದ ಸ್ವಾಮಿ ವಿವೇಕಾನಂದರು ಎಂದು ಹೇಳಬಹುದು ಎಂದಿದ್ದಾರೆ. ಈ ಹೇಳಿಕೆ ವಿರುದ್ಧ ಬಂಗಾಳದ ಆಡಳಿತಾರೂಢ ಟಿಎಂಸಿ ತೀವ್ರ ಆಕ್ರೋಶ ಹೊರ ಹಾಕಿದೆ.

Advertisement

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾ ಸನ್ಯಾಸಿಗೆ ನಮನ ಸಲ್ಲಿಸಿದ್ದು, ವಿವೇಕಾನಂದರ ಉಲ್ಲೇಖಗಳಲ್ಲಿ ಒಂದನ್ನು ಬಂಗಾಳಿ ಭಾಷೆಯಲ್ಲಿ ಶ್ರದ್ಧಾಂಜಲಿಯಾಗಿ ಬರೆದು ಅವರ ಚಿತ್ರವನ್ನು ಪೋಸ್ಟ್ ಮಾಡಿ “ಮನುಷ್ಯತ್ವವನ್ನು ಸೇವಿಸುವವರಲ್ಲಿ ದೇವರನ್ನು ಕಾಣಬಹುದು, ನಮ್ಮ ಮುಂದೆ ವಿಭಿನ್ನ ರೂಪದಲ್ಲಿ ಪ್ರಕಟವಾಗುತ್ತದೆ.” ಎಂದು ಬಣ್ಣಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next