ಲಕ್ನೋ: ಭಾರತದ ಮೊದಲ ಸೆಮಿ ಹೈ ಸ್ಪೀಡ್ ಪ್ರಾದೇಶಿಕ ರೈಲು ಸೇವೆ “ನಮೋ ಭಾರತ್ “ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಅಕ್ಟೋಬರ್ 20) ಉತ್ತರಪ್ರದೇಶದಲ್ಲಿ ಚಾಲನೆ ನೀಡಿದರು.
ಇದನ್ನೂ ಓದಿ:Kannur: ರೈಲಿನಿಂದ ಆಯತಪ್ಪಿ ಬಿದ್ದು ಕಡಬದ ಯುವಕ ಮೃತ್ಯು
ಉತ್ತರಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡೆಪೊಟ್ ರೈಲು ನಿಲ್ದಾಣ ಸಂಪರ್ಕಿಸುವ ನಮೋ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದು ಭಾರತದ ಮೊದಲ ಆರ್ ಆರ್ ಟಿಎಸ್ (Regional Rapid Train Service) ಸೇವೆ ಇದಾಗಿದೆ.
17 ಕಿಲೋ ಮೀಟರ್ ಉದ್ದದ ಆರ್ ಆರ್ ಟಿಎಸ್ ಕಾರಿಡಾರ್ ರೈಲು ಸೇವೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಇದೊಂದು ನವರಾತ್ರಿ ಶುಭ ಸಂದರ್ಭದಲ್ಲಿ ಇಡೀ ದೇಶಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದು ಬಣ್ಣಿಸಿದರು.
ಇಂದು ಭಾರತದ ಮೊದಲ ರಾಪಿಡ್ ರೈಲು ಸೇವೆ ನಮೋ ಭಾರತ್ ರೈಲು ಸಂಚಾರ ಆರಂಭಗೊಂಡಿದೆ. ಈ ಸೇವೆಯನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.