Advertisement
ಜೈ ಮಹಾಕಾಲ್, ಉಜ್ಜಯಿನಿಯ ಈ ಶಕ್ತಿ, ಈ ಉತ್ಸಾಹ!, ಈ ಸೆಳವು, ಈ ಅದ್ಭುತತೆ, ಈ ಆನಂದ!. ಮಹಾಕಾಲನ ಈ ಮಹಿಮೆ, ಈ ಹಿರಿಮೆ!. ಶಂಕರನ ಸಾನಿಧ್ಯದಲ್ಲಿ ಸಾಮಾನ್ಯವಾದುದೇನೂ ಇಲ್ಲ. ಎಲ್ಲವೂ ಅಲೌಕಿಕ, ಅಸಾಧಾರಣ.ಮರೆಯಲಾಗದ್ದು, ನಂಬಲಾಗದ್ದು, ಎಂದು ಪ್ರಧಾನಿ ಮಾತುಗಳನ್ನಾರಂಭಿಸಿದರು.
Related Articles
Advertisement
ಮಹಾಕಾಲ್ ಲೋಕ ಯೋಜನೆಯ ವೆಚ್ಚ 856 ಕೋಟಿ ರೂ.ಗಳಾಗಿದ್ದು, ಮೊದಲ ಹಂತದಲ್ಲಿ 351 ಕೋಟಿ ರೂ.ಗೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಯೋಜನೆಯು ಶಿವನಿಗೆ ಸಮರ್ಪಿತವಾಗಿರುವ ಮತ್ತು ಭಾರತದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ದೇವಾಲಯಕ್ಕೆ ಭೇಟಿ ನೀಡುವವರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುತ್ತದೆ.
ಕಾರಿಡಾರ್ ಸುಮಾರು 108 ಕಲಾತ್ಮಕವಾಗಿ ಅಲಂಕೃತವಾದ ಸ್ತಂಭಗಳನ್ನು ಹೊಂದಿದೆ, ಇದು ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ಮಾಡಲ್ಪಟ್ಟಿದೆ, ಇದು ಆನಂದ್ ತಾಂಡವ್ ಸ್ವರೂಪ, 200 ಪ್ರತಿಮೆಗಳು ಮತ್ತು ಶಿವ ಮತ್ತು ಶಕ್ತಿ ದೇವತೆಯ ಭಿತ್ತಿಚಿತ್ರಗಳನ್ನು ಒಳಗೊಂಡಿದೆ.
ಕಾರಿಡಾರ್ ಯೋಜನೆಯನ್ನು ಉದ್ಘಾಟಿಸುವ ಮುನ್ನ ಮೋದಿ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.