Advertisement

ಬುಡಕಟ್ಟು ಜನಾಂಗದ ಕಲ್ಯಾಣಕ್ಕೆ ಶ್ರಮ: ಮೋದಿ

09:24 PM Feb 16, 2023 | Team Udayavani |

ನವದೆಹಲಿ: ಬುಡಕಟ್ಟು ಜನಾಂಗದ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 2014ರಿಂದ ಬಜೆಟ್‌ನಲ್ಲಿ ಮೀಸಲು ಹೆಚ್ಚಳ ಮಾಡುತ್ತಾ ಬರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ನವದೆಹಲಿಯಲ್ಲಿ  ಬುಡಕಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆದಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಮೊದಲ ಬಾರಿಗೆ ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಸಮುದಾಯದ ಮಹಿಳೆ ಏರಿದ್ದಾರೆ,’ ಎಂದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸ್ವಾತಂ ತ್ರ್ಯ ಹೋರಾಟಗಾರ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದರು. ಬುಡಕಟ್ಟು ಸಂಸ್ಕೃತಿ, ಕರಕುಶಲ, ಪಾಕ ಪದ್ಧತಿ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಮಹೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.

ನಂತರ ರಾಜಸ್ಥಾನ ಸಿರೋಹಿ ಜಿಲ್ಲೆಯ ಬ್ರಹ್ಮ ಕುಮಾರೀಸ್‌ ಸಂಸ್ಥೆ ವತಿಯಿಂದ ಆಯೋಜಿಸಿರುವ “ಜಲ ಜನ್‌ ಅಭಿಯಾನ’ಕ್ಕೆ ವರ್ಚುವಲ್‌ ಆಗಿ ಚಾಲನೆ ನೀಡಿದ ಪ್ರಧಾನಿ ಮೋದಿ, “ಮುಂದಿನ ದಿನಗಳಲ್ಲಿ ಭಾರತಕ್ಕೆ ಜಲ ಭದ್ರತೆ ಅಗತ್ಯವಾಗಿದೆ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next