Advertisement

ಮೋದಿ ಮುಕ್ತ ಆಹ್ವಾನ

12:30 AM Sep 24, 2021 | Team Udayavani |

ವಾಷಿಂಗ್ಟನ್‌: ಭಾರತೀಯ ಸೇನೆಯ ಬಲ ವರ್ಧನೆ, 5ಜಿ, ಡಿಜಿಟಲ್‌ ತಂತ್ರಜ್ಞಾನ ಅಭಿವೃದ್ಧಿಯ ಪ್ರಧಾನ ಉದ್ದೇಶದೊಂದಿಗೆ ಜಾಗತಿಕ ಮಟ್ಟದ ಐದು ಬೃಹತ್‌ ಕಂಪೆನಿಗಳ ಸಿಇಒಗಳ ಜತೆಗೆ ಮಾತುಕತೆ ನಡೆಸುವ ಮೂಲಕ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಆರಂಭಿಸಿದ್ದಾರೆ.

Advertisement

ಗುರುವಾರ ರಾತ್ರಿ (ಅಮೆರಿಕ ಕಾಲಮಾನದಲ್ಲಿ ಬೆಳಗ್ಗೆ) ಅಡೋಬ್‌ ಸಿಇಒ ಶಂತನು ನಾರಾಯಣ್‌, ಕ್ವಾಲ್ಕಮ್‌ ಸಿಇಒ ಕ್ರಿಶ್ಚಿಯಾನೋ ಅಮನ್‌, ಫ‌ಸ್ಟ್‌ ಸೋಲಾರ್‌ನ ಮಾರ್ಕ್‌ ವಿಡ್ಮಾರ್‌, ಜನರಲ್‌ ಅಟಾಮಿಕ್ಸ್‌ನ ವಿವೇಕ್‌ ಲಾಲ್‌ ಮತ್ತು ಬ್ಲ್ಯಾಕ್‌ಸ್ಟೋನ್‌ ಸಿಇಒ ಸ್ಟೀಫ‌ನ್‌ ಎ ಶ್ವಾರ್ಝ್ ಮ್ಯಾನ್‌ ಜತೆಗೆ ಪ್ರಧಾನಿ ಮಾತುಕತೆ ನಡೆಸಿದರು.

ಇವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ಮೋದಿ, ಭಾರತದಲ್ಲಿ ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತನ್ನ ಸರಕಾರದ ಪ್ರಮುಖ ಘೋಷಣೆಯಾದ “ಡಿಜಿಟಲ್‌ ಇಂಡಿಯಾ’ದ ಬಲವರ್ಧನೆಗಾಗಿ ತಂತ್ರಜ್ಞಾನ ಸಹಾಯ ಒದಗಿಸುವಂತೆ ಪ್ರಸ್ತಾವ ಮಂಡಿಸಿದರು.

ಅಡೋಬ್‌ ಸಿಇಒ ಶಂತನು:

ಭಾರತೀಯ ಮೂಲದವರೇ ಆದ ಶಂತನು ನಾರಾಯಣ್‌ ಅವರನ್ನು ಭೇಟಿಯಾದ ಪ್ರಧಾನಿ, ಡಿಜಿಟಲ್‌ ಇಂಡಿಯಾ, ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾತ್ಮಕ ಬೆಳವಣಿಗೆ ಕೇಂದ್ರಿತ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಶಂತನು ಈ ಭೇಟಿಯ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದು, ಕೃತಕ ಬುದ್ಧಿಮತ್ತೆ, ನವೋದ್ಯಮಗಳ ಪ್ರಾಮುಖ್ಯದ ಬಗ್ಗೆ ಚರ್ಚಿಸಲಾಯಿತು ಎಂದರು. ಭಾರತದಲ್ಲಿ ಅಡೋಬ್‌ ಇನ್ನಷ್ಟು ಕೆಲಸ ಮಾಡಬಹುದಾಗಿದೆ ಎಂದು ಭೇಟಿ ಬಳಿಕ ಶಂತನು ಉಲ್ಲೇಖೀಸಿದರು.

Advertisement

ಜನರಲ್‌ ಅಟಾಮಿಕ್ಸ್‌ನ ವಿವೇಕ್‌ ಲಾಲ್‌:

ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಮೂಲದ ಇನ್ನೊಬ್ಬರು ಜನರಲ್‌ ಅಟಾಮಿಕ್ಸ್‌ನ ಸಿಇಒ ವಿವೇಕ್‌ ಲಾಲ್‌. ಭಾರತೀಯ ಸೇನೆಯ ಬಲವರ್ಧನೆಗಾಗಿ 30 ಪ್ರಿಡೇಟರ್‌ ಡ್ರೋನ್‌ಗಳ ಖರೀದಿಯ ಮಾತುಕತೆ ನಡೆಯಿತು. ಭಾರತ ಮತ್ತು ಅಮೆರಿಕ ನಡುವಿನ ಹಲವಾರು ರಕ್ಷಣ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಾಲ್‌, ಭಾರತದ ರಕ್ಷಣ ವಲಯದಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಭಾರತದ ರಕ್ಷಣ ತಂತ್ರಜ್ಞಾನವನ್ನು ಬಲಪಡಿಸುವ ಕುರಿತಂತೆಯೂ ಚರ್ಚಿಸಿದರು.

ನಾವು 5ಜಿ, ಸೆಮಿಕಂಡಕ್ಟರ್‌ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದೆವು. – ಕ್ರಿಶ್ಚಿಯಾನೋ ಅಮನ್‌, ಕ್ವಾಲ್ಕಮ್‌ ಸಿಇಒ

ಭಾರತ ಹೂಡಿಕೆಗೆ ಪ್ರಶಸ್ತ ಸ್ಥಳ, ಅಲ್ಲಿ ಹೆಚ್ಚು ಹೂಡಿಕೆಗೆ ಉತ್ಸುಕರಾಗಿದ್ದೇವೆ. – ಸ್ಟೀಫ‌ನ್‌ ಶ್ವಾರ್ಝಮ್ಯಾನ್‌, ಬ್ಲ್ಯಾಕ್‌ಸ್ಟೋನ್‌ ಸಿಇಒ

ಹವಾಮಾನ ಬದಲಾವಣೆ ಸಂಬಂಧಿ ಉದ್ಯಮಗಳ ಬಗ್ಗೆ ಭಾರತ ಕೈಗೊಂಡಿ ರುವ ಕ್ರಮಗಳು ಪ್ರಶಂಸಾರ್ಹ. -ಮಾರ್ಕ್‌ ವಿಡ್ಮಾರ್‌, ಫ‌ಸ್ಟ್‌ ಸೋಲಾರ್‌ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next