Advertisement

ಈ ಮಣ್ಣಿನ ಮಗನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ : ದೀದಿಗೆ ಮೋದಿ ತಿರುಗೇಟು

09:37 PM Apr 03, 2021 | Team Udayavani |

ಸೋನಾರ್‌ಪುರ:  ಮಮತಾ ದೀದಿ ಪಶ್ಚಿಮ ಬಂಗಾಳದಿಂದ ಬೇರೆಡೆ ಜಾಗ ಹುಡುಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದ್ದಾರೆ.

Advertisement

ಇಂದು ಪಶ್ಚಿಮ ಬಂಗಾಳದ ಸೋನಾರ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಟಿಎಂಸಿ ಹಾಗೂ ದೀದಿ ವಿರುದ್ಧ ಮಾತಾಡಿರುವ ಮೋದಿ, ಮೇ 2 ರಂದು ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದ್ದು, ಈ ಮಣ್ಣಿನ ಮಗನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಯಾವುದೇ ಭಾರತೀಯ ಹೊರಗಿನವರಲ್ಲ ಎಂದು ದೀದಿಗೆ ತಿರುಗೇಟು ನೀಡಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೀದಿ ವಾರಾಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಟಿಎಂಸಿ ಹೇಳಿಕೆಗೆ ತಮ್ಮ ಭಾಷಣದುದ್ದಕ್ಕೂ ಪ್ರತ್ಯುತ್ತರ ನೀಡಿದ ಮೋದಿ, ವಾರಣಾಸಿ ಮತ್ತು ಉತ್ತರ ಪ್ರದೇಶದ ಜನರು ಬಂಗಾಳದ ಜನರಷ್ಟೇ ದೊಡ್ಡ ಹೃದಯದವರು. ಅವರು ಮಮತಾ ಬ್ಯಾನರ್ಜಿಯವರನ್ನು ಹೊರಗಿನವರು ಎಂದು ಕರೆಯುವುದಿಲ್ಲ ಎಂದರು.

ಇನ್ನು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕರು “ಹೊರಗಿನವರು” ಎನ್ನುವ ಅಸ್ತ್ರ ಬಳಸುತ್ತಿರುವ ದೀದಿಗೆ ಚಾಟಿ ಬೀಸಿದ ಪ್ರಧಾನಿಯವರು, ಇದು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸಿದ್ಧಾಂತ ಮತ್ತು ಭಾರತೀಯ ಸಂವಿಧಾನದ ತತ್ವಗಳಿಗೆ ಮಾಡಿದ ಅವಮಾನ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next