Advertisement

ಕಪ್ಪುಹಣ: ಸ್ವಿಸ್‌ ಅಧ್ಯಕ್ಷೆ ಜತೆ ಚರ್ಚೆ

07:20 AM Sep 01, 2017 | Team Udayavani |

ಹೊಸದಿಲ್ಲಿ:  ಕಪ್ಪುಹಣ, ತೆರಿಗೆವಂಚನೆಗೆ ಸಂಬಂಧಿಸಿ ಜಾಗತಿಕ, ಸ್ಥಳೀಯ ಹಾಗೂ ಉಭಯ ರಾಷ್ಟ್ರಗಳ ನಡುವಿನ
ಸಮಸ್ಯೆಗಳ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ಸ್ವಿಜರ್ಲೆಂಡ್‌ನ‌ ಅಧ್ಯಕ್ಷೆ ಡಾರಿಸ್‌ ಲೆಥಾರ್ಡ್‌ ಗುರುವಾರ ಮಾತುಕತೆ ನಡೆಸಿದರು.

Advertisement

ಭಾರತ ಪ್ರವಾಸದಲ್ಲಿರುವ ಲೆಥಾರ್ಡ್‌ ಅವರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ, ಪರಮಾಣು ಪೂರೈಕೆದಾರರ ಗ್ರೂಪ್‌(ಎನ್‌ಎಸ್‌ಜಿ)ಗೆ ಸೇರ್ಪಡೆಯಾಗುವ ಬಗ್ಗೆ ಭಾರತವನ್ನು ಬೆಂಬಲಿಸಿದ್ದಕ್ಕೆ ಅಭಿನಂದಿಸಿದರು. ಇದೇ ವೇಳೆ, ಸ್ವಿಸ್‌ನಲ್ಲಿ ಖಾತೆ ಹೊಂದಿರುವ ಭಾರತೀಯರ ಮಾಹಿತಿಯು ಭಾರತಕ್ಕೆ 2019 ರಲ್ಲಿ ಸಿಗುವ ಸಾಧ್ಯತೆ ಅಧಿಕವಾಗಿದೆ ಎಂದು ಸ್ವಿಸ್‌ ಅಧ್ಯಕ್ಷೆ ಲೆಥಾರ್ಡ್‌ ಹೇಳಿದ್ದಾರೆ. ಮಾಹಿತಿ ವಿನಿಮಯ ಒಪ್ಪಂದದಂತೆ ಖಾತೆದಾರರ ವಿವರಗಳನ್ನು ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಮಾತುಕತೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಕಪ್ಪುಹಣ ಹಾಗೂ ತೆರಿಗೆ ವಿಚಾರವಾಗಿ ಸ್ವಿಸ್‌ ಅಧ್ಯಕ್ಷೆ ಜತೆ ಮಹತ್ವದ ಮಾತುಕತೆ ನಡೆದಿದೆ. ರೈಲ್ವೇ ವಲಯದಲ್ಲಿ ಸಹಕಾರ ಸಂಬಂಧ 2 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next