Advertisement

ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ

11:47 PM Feb 25, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದರು.

Advertisement

ನಮ್ಮ ಮಾತುಕತೆಗಳು ಭಾರತ-ಜರ್ಮನಿ ಸಹಕಾರವನ್ನು ಹೆಚ್ಚಿಸುವ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಮೇಲೆ ಕೇಂದ್ರೀಕೃತವಾಗಿವೆ. ನವೀಕರಿಸಬಹುದಾದ ಶಕ್ತಿ, ಹಸಿರು ಜಲಜನಕ ಮತ್ತು ಜೈವಿಕ ಇಂಧನಗಳಲ್ಲಿ ಸಂಬಂಧಗಳನ್ನು ಗಾಢವಾಗಿಸಲು ನಾವು ಒಪ್ಪಿಕೊಂಡಿದ್ದೇವೆ. ಭದ್ರತಾ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಓಲಾಫ್ ಸ್ಕೋಲ್ಜ್ ಮತ್ತು ನಮ್ಮ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲು ನಾನು ಉನ್ನತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಭೇಟಿಯಾದೆ. ಡಿಜಿಟಲ್ ರೂಪಾಂತರ, ಫಿನ್‌ಟೆಕ್, ಐಟಿ ಮತ್ತು ಟೆಲಿಕಾಂನಂತಹ ವಲಯಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಮಾತುಕತೆ ನಡೆಸಲಾಯಿತು.

ಒಲಾಫ್ ಗೆ ಮೇಘಾಲಯದ ಮೇಲುವಸ್ತ್ರ, ನಾಗಾಲ್ಯಾಂಡ್‌ನ‌ ಶಾಲುಗಳ ಕಾಣಿಕೆ

ಜರ್ಮನಿ ಚಾನ್ಸೆಲರ್‌ ಒಲಾಫ್ ಶಾಲ್ಜ್ ಗೆ  ಪ್ರಧಾನಿ ಮೋದಿ ವಿಶೇಷ ಕಾಣಿಕೆ ನೀಡಿದ್ದಾರೆ. ಮೇಘಾಲಯದಲ್ಲಿ ಮಹಿಳೆ ಯರು ಧರಿಸುವ ಮೇಲುವಸ್ತ್ರ, ನಾಗಾ ಲ್ಯಾಂಡ್‌ನ‌ ಶಾಲ್‌ಗ‌ಳನ್ನು ನೀಡಿದ್ದಾರೆ. ಈ ಎರಡೂ ವಸ್ತುಗಳು ಈಶಾನ್ಯ ರಾಜ್ಯಗಳ ಸಂಸ್ಕೃತಿ, ಕರಕುಶಲತೆಯನ್ನು ಬಿಂಬಿಸುತ್ತವೆ ಮೂಲಗಳು ತಿಳಿಸಿವೆ. ಅದರಲ್ಲೂ ಮೇಘಾಲಯದ ಮೇಲು ವಸ್ತ್ರಗಳು ಹಲವು ಶತಮಾನಗಳ ಇತಿಹಾಸವನ್ನು ಹೊಂದಿವೆ. ಅವಕ್ಕೆ ಶ್ರೀಮಂತ ಇತಿಹಾಸ ವಿದೆ. ಅವುಗಳ ನೇಯ್ಗೆಯನ್ನು ಪ್ರಾಚೀನ ಕ್ರಮದಂತೆ ಮಾಡಲಾಗುತ್ತದೆ. ಆ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಬೆಳೆ ದುಕೊಂಡೇ ಬಂದಿದೆ. ಅದನ್ನು ಖಾಸಿ, ಜೈನಿಯ ರಾಜಮನೆತನಕ್ಕಾಗಿ ನೇಯಲಾಗುತ್ತಿತ್ತು. ವಿಶೇಷ ಹಬ್ಬಗಳಲ್ಲಿ ಮಾತ್ರ ಅವುಗಳನ್ನು ರಾಜರು ಧರಿಸುತ್ತಿದ್ದರು. ಗಮನಾರ್ಹ ಸಂಗತಿಯೆಂದರೆ ಇದನ್ನು ನೇಯುವ ಕೆಲಸ ಮಾಡುವುದು ಮಹಿಳೆಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next