ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿ ಒಂಬತ್ತು ವರ್ಷಗಳಾಗಿದ್ದು, ಈ ದೀರ್ಘಾವಧಿಯಲ್ಲಿ ಅವರು ಒಂದೇ ಒಂದು ರಜೆ ಪಡೆದಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಪ್ರಧಾನಮಂತ್ರಿ ಕಚೇರಿ ಈ ಉತ್ತರ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Kriti Sanon: “ಅವರು ನನ್ನನ್ನು 50 ಜನರ ಮುಂದೆ..” ಕರಾಳ ಘಟನೆಯನ್ನು ನೆನೆದ ನಟಿ ಕೃತಿ
ಆರ್ ಟಿಐನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಮಂತ್ರಿ ಕಚೇರಿ, 2014ರ ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಈವರೆಗೆ 3,000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದಾಗಿ ಉಲ್ಲೇಖಿಸಿದೆ.
ಪ್ರಧಾನಮಂತ್ರಿ ಮೋದಿಯವರು ಎಲ್ಲಾ ಸಮಯದಲ್ಲೂ ಕರ್ತವ್ಯ ನಿರತರಾಗಿರುತ್ತಾರೆ ಎಂದು ಆರ್ ಟಿಐ ಉತ್ತರದಲ್ಲಿ ತಿಳಿಸಲಾಗಿದೆ. ಆರ್ ಟಿಐ ಅರ್ಜಿದಾರರನ್ನು ಪ್ರಫುಲ್ ಪಿ ಸರ್ದಾ ಎಂದು ನಮೂದಿಸಲಾಗಿದ್ದು, ಇದು 2023ರ ಜುಲೈ 31ರಂದು ನೀಡಲಾಗಿರುವ ಅರ್ಜಿ ಎಂದು ಸ್ವೀಕೃತಿ ನೀಡಲಾಗಿದೆ.
20 ವರ್ಷಗಳವರೆಗೆ ಪ್ರಧಾನಿ ಮೋದಿ ರಜೆ ಪಡೆಯುವುದಿಲ್ಲ: ಅಮಿತ್ ಶಾ
ಸಾರ್ವಜನಿಕವಾಗಿ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರಜೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು 2019ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾ, ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರು 20ವರ್ಷಗಳವರೆಗೆ ರಜೆಯನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದರು.