Advertisement

ಲಘು ಯುದ್ಧ ಹೆಲಿಕಾಪ್ಟರ್‌ ಸೇನೆಗೆ ಹಸ್ತಾಂತರ

09:25 PM Nov 19, 2021 | Team Udayavani |

ನವದೆಹಲಿ: ಭಾರತಕ್ಕೆ ಹೆಮ್ಮೆಯ ಸಂಗತಿ ಎಂಬಂತೆ, ದೇಶೀಯವಾಗಿ ನಿರ್ಮಿಸಲಾದ ಮೊದಲ ಲಘು ಸಮರ ಹೆಲಿಕಾಪ್ಟರ್‌(ಎಲ್‌ಸಿಎಚ್‌) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಶಸ್ತ್ರ ಪಡೆಗೆ ಸಾಂಕೇತಿಕವಾಗಿ ಹಸ್ತಾಂತರಿಸಿದ್ದಾರೆ.

Advertisement

ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಈ ಕಾಪ್ಟರ್‌ ಅನ್ನು ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದ “ರಾಷ್ಟ್ರ ರಕ್ಷಾ ಸಮರ್ಪಣ್‌ ಪರ್ವ್‌’ನಲ್ಲಿ ಹಸ್ತಾಂತರಿಸಲಾಯಿತು.

ಎಲ್‌ಸಿಎಚ್‌ ವೈಶಿಷ್ಟ್ಯವೇನು?
ಈ ಸಮರ ಹೆಲಿಕಾಪ್ಟರ್‌ ಅವಳಿ-ಎಂಜಿನ್‌ ಹೊಂದಿದೆ. ನಿರ್ದಿಷ್ಟ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಇಂಧನವನ್ನು ಹೊತ್ತು 5,000 ಮೀಟರ್‌(16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್‌ ಹಾಗೂ ಟೇಕಾಫ್ ಮಾಡಬಲ್ಲ ಜಗತ್ತಿನ ಮೊತ್ತಮೊದಲ ಅಟ್ಯಾಕ್‌ ಹೆಲಿಕಾಪ್ಟರ್‌ ಇದಾಗಿದೆ. ಹಿಮಚ್ಛಾದಿತ ಪ್ರದೇಶದಲ್ಲಿ ಮೈನಸ್‌ 50 ಡಿ.ಸೆ.ನಿಂದ ಹಿಡಿದು ಮರಳುಗಾಡಿನ 50 ಡಿ.ಸೆ. ತಾಪಮಾನದಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಇದಕ್ಕಿದೆ.

ಇದನ್ನೂ ಓದಿ:ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ

ತಿರುಗುವ ಸಾಮರ್ಥ್ಯ
ಕಾರ್ಯಾಚರಣೆಯ ವೇಳೆ ಈ ಹೆಲಿಕಾಪ್ಟರ್‌ ಅನ್ನು ಕೈಯಿಂದಲೇ ಆಪರೇಟ್‌ ಮಾಡಬಹುದಾಗಿದೆ. ಅದು 360 ಡಿಗ್ರಿಯಲ್ಲಿ ತಿರುಗುವ ಸಾಮರ್ಥ್ಯವನ್ನೂ ಹೊಂದಿದ್ದು, ಗಾಳಿಯಲ್ಲೇ ಕ್ಷಿಪ್ರವಾಗಿ ತಿರುಗಬಲ್ಲದು.

Advertisement

ಹೆಲಿಕಾಪ್ಟರ್‌ನ ತೂಕ- 5-8 ಟನ್‌
ಅಭಿವೃದ್ಧಿಪಡಿಸಿದ್ದು – ಎಚ್‌ಎಎಲ್‌
ಎಷ್ಟು ಎತ್ತರಕ್ಕೆ ಹಾರಬಲ್ಲದು?-16,000 ಅಡಿ
ಎಷ್ಟು ಎತ್ತರದಲ್ಲಿ ಟೇಕಾಫ್-ಲ್ಯಾಂಡಿಂಗ್‌ ಮಾಡಬಲ್ಲದು?- 16,400 ಅಡಿ
ಕಾಪ್ಟರ್‌ನಲ್ಲೇನಿದೆ?- 20 ಎಂ.ಎಂ. ಗನ್‌, 70 ಎಂ.ಎಂ. ರಾಕೆಟ್‌, ಏರ್‌ ಟು ಏರ್‌ ಕ್ಷಿಪಣಿಗಳು

 

 

Advertisement

Udayavani is now on Telegram. Click here to join our channel and stay updated with the latest news.

Next