Advertisement

PM Modi;ಮಿಷನ್‌ ಅಮೃತ ಸರೋವರ ಗುರಿ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ

08:05 PM Apr 05, 2023 | Team Udayavani |

ನವದೆಹಲಿ: “ಮಿಷನ್‌ ಅಮೃತ ಸರೋವರ’ದ ಅನ್ವಯ 11 ತಿಂಗಳಲ್ಲಿ ನಡೆದಿರುವ ಅಭಿವೃದ್ಧಿಯು ಅಮೃತಕಾಲದ ನಮ್ಮ ಸಂಕಲ್ಪಗಳಿಗೆ ಹೊಸ ಶಕ್ತಿ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Advertisement

ಆಗಸ್ಟ್‌ ವೇಳೆಗೆ 50,000 ಜಲಮೂಲಗಳ ಅಭಿವೃದ್ಧಿಗೆ ಯೋಜಿಸಲಾಗಿದೆ. ಈಗಾಗಲೇ ಕೇವಲ 11 ತಿಂಗಳಲ್ಲೇ 40 ಸಾವಿರಕ್ಕೂ ಅಧಿಕ ಜಲಮೂಲಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ಮೂಲಕ ನಿಗದಿಪಡಿಸಿದ್ದ ಗುರಿಯ ಶೇ.80 ಭಾಗ ಈಡೇರಿಸಿದಂತಾಗಿದೆ. ಹೀಗಾಗಿ, ಯೋಜನೆ ಶೀಘ್ರವೇ ತನ್ನ ಗುರಿ ತಲುಪಲಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ ಶುಭಕೋರಿ, ಈ ವರೆಗಿನ ಸಾಧನೆ ಹೊಸ ಸಂಕಲ್ಪಗಳಿಗೆ ಶಕ್ತಿ ತಂದಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next