Advertisement
ಹೋಮ್ ಐಸೊಲೇಸನ್ ಟ್ರ್ಯಾಕಿಂಗ್ (HIT) ಆ್ಯಪ್ ಬಿಹಾರ್ ನಲ್ಲಿ ಸೋಮವಾರ(ಮೇ. 17)ದಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಡುಗಡೆ ಮಾಡಿದರು. ಸದ್ಯ ಬಿಹಾರ್ ನ ಎಲ್ಲಾ ಜಿಲ್ಲೆಗಳಲ್ಲಿ ಈ ಆ್ಯಪ್ ನ ಬಳಕೆಯಾಗುತ್ತಿದೆ.
Related Articles
Advertisement
ಇನ್ನು, ಬಿಹಾರ್ ನ ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಪ್ರತ್ಯಯಾ ಅಮೃತ್ ಸುದ್ದಿ ಸಂಸ್ಥೆ ಪಿಟಿಐ ನೊಂದಿಗೆ ಮಾತನಾಡಿ, ಪ್ರಧಾನಿಯವರ ಸೂಚನೆಯಂತೆ ಆ್ಯಪ್ ನ ಮಾಹಿತಿಯನ್ನು ಕೇಂದ್ರ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಆ್ಯಪ್ ನ ಸಹಾಯದಿಂದ, ಆರೋಗ್ಯ ಕಾರ್ಯಕರ್ತರು ಪ್ರತಿದಿನ ಸೋಂಕಿತರ ವಿಚಾರಣೆಗೆ ಸುಲಭವಾಗುತ್ತದೆ. ಅವರ ದೈಹಿಕ ತಾಪಮಾನ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿದ ನಂತರ ಅಪ್ಲಿಕೇಶನ್ ನಲ್ಲಿ ಡಾಟಾ ದಾಖಲು ಮಾಡಲಗುತ್ತದೆ.
ಈ ಆ್ಯಪ್ ಮೂಲಕ ದಾಖಲಾದ ಡಾಟಾವನ್ನು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸೋಂಕಿತನ ಆಮ್ಲಜನಕದ ಮಟ್ಟವು ಶೇ. 94 ಕ್ಕಿಂತ ಕಡಿಮೆಯಿದ್ದರೆ, ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ದಾಖಲಿಸಲಾಗುತ್ತದೆ.
ಬಿಹಾರ್ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಬಿಹಾರ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (BELTRON) ಎಚ್ ಐ ಟಿ ಆ್ಯಪ್ ಅಭಿವೃದ್ಧಿಪಡಿಸಿದೆ.
ಪ್ರಾಯೋಗಿಕವಾಗಿ ಈ ಅಪ್ಲಿಕೇಶನ್ ನನ್ನು ಆರಂಭದಲ್ಲಿ ಐದು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ಮತ್ತು ಅದರ ಯಶಸ್ಸನ್ನು ಆಧಾರದ ಮೇಲೆ ಈಗ ಬಿಹಾರ್ ರಾಜ್ಯಾದ್ಯಂತ ಬಳಸಲಾಗುತ್ತಿದೆ.
ಇದನ್ನೂ ಓದಿ : ಜಾಗ್ವಾರ್ ಲ್ಯಾಂಡ್ ರೋವರ್ : ಆ್ಯಂಟಿ ವೈರಸ್ ತಂತ್ರಜ್ಞಾನ ಕೋವಿಡ್ ವಿರುದ್ಧ ಪರಿಣಾಮಕಾರಿ !