ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುರುವಾರ ಹಿರಿಯ ಬಿಜೆಪಿ ನಾಯಕ ಲಾಲಕೃಷ್ಣ ಆಡ್ವಾಣಿ ಅವರಿಗೆ 91ನೇ ಹುಟ್ಟುಹಬ್ಬದ ಶುಭಾಶಯ ಹೇಳಿ ಅಭಿನಂದಿಸಿದ್ದಾರೆ.
Advertisement
ಟ್ವಿಟರ್‌ನಲ್ಲಿ ಶುಭಾಶಯ ಹೇಳಿರುವ ಪ್ರಧಾನಿ ಮೋದಿ, ಬಿಜೆಪಿಯ ಹಿರಿಯ ನಾಯಕರಾಗಿರುವ ಆಡ್ವಾಣಿ ಅವರು ಓರ್ವ ನಿಸ್ವಾರ್ಥ, ಕರ್ತವ್ಯಪರ ಮುತ್ಸದ್ದಿ ಎಂದು ಪ್ರಶಂಸಿಸಿದ್ದಾರೆ. ರಾಷ್ಟ್ರ ರಾಜಕಾರಣದ ಮೇಲೆ ಆಡ್ವಾಣಿ ಮಾಡಿರುವ ಪರಿಣಾಮ ಅಗಾಧವಾದದ್ದು ಎಂದು ಹೇಳಿದ್ದಾರೆ.
ಆಡ್ವಾಣಿ ಅವರಿಗೆ ಪ್ರಧಾನಿ ಮೋದಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಹಾರೈಸಿದ್ದಾರೆ. ಆಡ್ವಾಣಿ 1927ರ ನ.8ರಂದು ಈಗಿನ ಪಾಕಿಸ್ಥಾನದ ಕರಾಚಿಯಲ್ಲಿ ಜನಿಸಿದ್ದರು. ಅವರು ಬಿಜೆಪಿಯ ಸಹ ಸ್ಥಾಪಕರು.