ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ತಂದಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆಗೆ ಪ್ರಧಾನಿ ಮೋದಿಯವರು ಐಸ್ ಕ್ರಿಮ್ ಸವಿದಿದ್ದಾರೆ. ಈ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಟೊಕಿಯೋ ಒಲಂಪಿಕ್ಸ್ ನಿಂದ ಹಿಂತಿರುಗಿದ ಬಳಿಕ ಸಿಂಧು ಜೊತೆಗೆ ಐಸ್ ಕ್ರೀಂ ತಿನ್ನುವುದಾಗಿ ಪ್ರಧಾನಿ ಮಾತು ನೀಡಿದ್ದರು. ಅದರಂತೆ ಇಂದು(ಆ.16) ತಮ್ಮ ನಿವಾಸದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ನೀಡಿ, ಸಿಂಧು ಜೊತೆಗೆ ಐಸ್ ಕ್ರೀಂ ಸವಿದಿದ್ದಾರೆ.
ಪ್ರಧಾನಿ ಮೋದಿಯವರು ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಎಂದು ಕ್ರೀಡಾಪಟುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅಭಿನಂದಿಸುವ ಮೂಲಕ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.
ಜುಲೈ ತಿಂಗಳಲ್ಲಿ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಕ್ರೀಡಾಪಟುಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ, ರಿಯೋ ಒಲಂಪಿಕ್ಸ್ ಮೊದಲು ಪಿವಿ ಸಿಂಧು ಜೊತೆ ಐಸ್ ಕ್ರೀಂ ತಿನ್ನುವುದನ್ನು ಏಕೆ ತಡೆಹಿಡಿಯಲಾಗಿತ್ತು ಎಂಬುದನ್ನು ಹೇಳಿದ್ದ ಮೋದಿ, ಈ ಬಾರಿಯೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಶ್ರಮ ಪಟ್ಟು ಆಟವಾಡಿ, ನೀವು ಮತ್ತೊಮ್ಮೆ ಯಶಸ್ವಿಯಾಗುತ್ತೀರಿ ಎಂಬ ವಿಶ್ವಾಸ ನನಗಿದ್ದು, ನೀವೆಲ್ಲರೂ ಒಲಿಂಪಿಕ್ಸ್‌ನಿಂದ ಹಿಂತಿರುಗಿದಾಗ, ನಿಮ್ಮೊಂದಿಗೆ ಐಸ್ ಕ್ರೀಂ ಸೇವಿಸುವುದಾಗಿ ಮೋದಿ ಹೇಳಿದ್ದರು. ಅದೇ ರೀತಿಯಾಗಿ ಸೋಮವಾರ ಅವರೊಂದಿಗೆ ಐಸ್ ಕ್ರೀಂ ಸವಿದು ಅಭಿನಂದಿಸಿದರು.