ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಪ್ರವಾಸಕೈಗೊಂಡಿದ್ದು, ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಶನಿವಾರ ಚಾಲನೆ ನೀಡಿದರು.
ಈ ಭೇಟಿಯ ವೇಳೆ, ಮೋದಿ ಅವರು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಎಂಎಂಟಿಎಎಸ್ ಸೇವೆಗಳಿಗೂ ಚಾಲನೆ ನೀಡಿದ್ದಾರೆ.
ಸಿಕಂದರಾಬಾದ್ ನಲ್ಲಿ ನೂತನ ರೈಲ್ವೇ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ ಆಬಳಿಕ ಸಿಕಂದರಾಬಾದ್ ನಿಲ್ದಾಣದಲ್ಲಿಯೇ ರೈಲಿಗೆ ಚಾಲನೆ ನೀಡಿದರು. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಫೈಟರ್ ಜೆಟ್ ನಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ತೆಲಂಗಾಣ ಭೇಟಿ ವೇಳೆ ಪ್ರಧಾನಿ ಮೋದಿಯವರು 11,300 ಕೋಟಿ ರೂ. ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.