ಚೆನ್ನೈ: ಚೆಸ್ ಇತಿ ಹಾಸದಲ್ಲೇ ಮೊದಲ ಬಾರಿಗೆ “ಟಾರ್ಚ್ ರಿಲೇ’ಯೊಂದನ್ನು ಆಯೋಜಿಸ ಲಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಚಾಲನೆ ನೀಡಿದರು.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.
ಚೆನ್ನೈಸಮೀಪದ ಮಹಾಬಲಿಪುರಂ ನಲ್ಲಿ ನಡೆಯಲಿರುವ ಚೆಸ್ ಒಲಿಂ ಪಿಯಾಡ್‌ಗೆ ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ (ಫಿಡೆ) ಮೊದಲ ಸಲ ಒಲಿಂ ಪಿಕ್ಸ್ ಮಾದರಿಯ ಈ ಟಾರ್ಚ್ ರಿಲೇಯನ್ನು ಸಂಘಟಿಸಿತ್ತು. ಭಾರತ ಈ ರಿಲೇ ಏರ್ಪಡಿಸಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಡೆ ಅಧ್ಯಕ್ಷ ಆರ್ಕಡಿ ವೋರ್ಕೊವಿಕ್ ಜ್ಯೋತಿ ನೀಡಿದರು. ಬಳಿಕ ಪ್ರಧಾನಿಯವರು ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಕೊನೇರು ಹಂಪಿ ಜತೆ ಮೋದಿ ಚೆಸ್ ಆಡಿದರು.
ಈ ಟಾರ್ಚ್ ರಿಲೇ ಮುಂದಿನ 40 ದಿನಗಳ ಅವಧಿಯಲ್ಲಿ ದೇಶದ 75 ನಗರಗಳನ್ನು ಹಾದು ಹೋಗಲಿದೆ. ಪ್ರತಿಯೊಂದು ರಾಜ್ಯದ ಗ್ರ್ಯಾನ್‌ಮಾಸ್ಟರ್ ಈ ಜ್ಯೋತಿಯನ್ನು ಸ್ವೀಕರಿ ಸಲಿದ್ದಾರೆ. ಕೊನೆಯಲ್ಲಿ ಮಹಾಬಲಿ ಪುರಂ ತಲುಪಲಿದೆ. ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ 1927ರಲ್ಲಿ ಮೊದಲ್ಗೊಂಡಿತ್ತು. ಇದು 44ನೇ ಪಂದ್ಯಾವಳಿ. ಜು. 28ರಿಂದ ಆ. 10ರ ತನಕ ನಡೆಯಲಿದೆ. 30 ವರ್ಷಗಳ ಬಳಿಕ ಏಷ್ಯಾದಲ್ಲಿ ಮೊದಲ ಸಲ ನಡೆಯುತ್ತಿರುವುದೊಂದು ವಿಶೇಷ.