Advertisement

PM ಮೋದಿ ಫ್ಯಾಸಿಸ್ಟ್‌ ಗೂಗಲ್‌ ಎಐ ಜೆಮಿನಿ ಉತ್ತರ!; ಕೆರಳಿದ ಕೇಂದ್ರ ಸರಕಾರ

01:04 AM Feb 24, 2024 | Team Udayavani |

ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಗಾಮಿಯೇ’ ಎನುವ ಪ್ರಶ್ನೆಗೆ ಗೂಗಲ್‌ನ ಎಐ ಟೂಲ್‌ ಜೆಮಿನಿ ನೀಡಿರುವ ಪಕ್ಷಪಾತಿ ಉತ್ತರವು ಕೇಂದ್ರ ಸರಕಾರವನ್ನು ಕೆರಳಿಸಿದೆ.

Advertisement

ಜೆಮಿನಿ ನೀಡಿರುವ ಉತ್ತರ ಐಟಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂ ಸಿದೆ. ಅಲ್ಲದೆ ಕ್ರಿಮಿನಲ್‌ ಕೋಡ್‌ನ‌ ಹಲವಾರು ನಿಬಂಧನೆಗಳಿಗೂ ವಿರುದ್ಧವಾಗಿದೆ ಎಂದು ಕೇಂದ್ರ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಡಿ ಕಾರಿದ್ದಾರೆ.
ಪತ್ರಕರ್ತರೊಬ್ಬರು ಜೆಮಿನಿಯನ್ನು ಮೋದಿ ಪ್ರತಿಗಾಮಿಯೇ ಎಂದು ಕೇಳಿದಾಗ “ಹೌದು’ ಎನ್ನುವ ಅರ್ಥದಲ್ಲಿ ಎಐ ಉತ್ತರಿಸಿದೆ. ಇದೇ ಪಶ್ನೆಯನ್ನು ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಹಾಗೂ ಉಕ್ರೇನ್‌ ಅಧ್ಯಕ್ಷ
ಝೆಲೆನ್ಸ್‌ಕಿ ಬಗ್ಗೆ ಕೇಳಿದಾಗ “ನಿಖರವಾದ ಉತ್ತರವಿಲ್ಲ’ ಎನ್ನುವಂತೆ ಪ್ರತಿಕ್ರಿಯಿಸಿದೆ. ಜೆಮಿನಿಯ ಉತ್ತರಗಳನ್ನು ಆ ಪತ್ರಕರ್ತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ರಾಜೀವ್‌ ಚಂದ್ರಶೇಖರ್‌ ಗೂಗಲ್‌ ಎಐನ ಪಕ್ಷಪಾತಿ ನಿಲುವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next