ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 9 ವರ್ಷಗಳ ಅವಧಿಯಲ್ಲಿ ಒಂದು ರಜೆಯನ್ನೂ ತೆಗೆದುಕೊಂಡಿಲ್ಲ. ಜತೆಗೆ 3 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ನೀಡಿದ ಉತ್ತರದಲ್ಲಿ ಈ ಕುತೂಹಲಕಾರಿ ಅಂಶ ವ್ಯಕ್ತವಾಗಿದೆ. ಪುಣೆಯ ಪ್ರಫುಲ್ ಪಿ.ಸರ್ದಾ ಎಂಬುವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
“ಪ್ರಧಾನಮಂತ್ರಿಗಳು ಯಾವತ್ತೂ ಕರ್ತವ್ಯದಲ್ಲಿಯೇ ಇರುತ್ತಿದ್ದರು. 2014ರ ಮೇನಲ್ಲಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಒಂದೇ ಒಂದು ರಜೆಯನ್ನು ಪಡೆದುಕೊಂಡಿಲ್ಲ. ದೇಶದಲ್ಲಿ ಮತ್ತು ವಿದೇಶಗಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ’ ಉತ್ತರವನ್ನು ಪಿಎಂಒ ನೀಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮ ಬಿಸ್ವಾ ಆರ್‌ಟಿಐ ಉತ್ತರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಉತ್ತರ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕಾಗಿ ದುಡಿಯುವ ಸಮರ್ಪಣಾ ಭಾವಕ್ಕೆ ಮೆಚ್ಚುಗೆ ಟ್ವಿಟರ್‌ನಲ್ಲಿ ವ್ಯಕ್ತವಾಗಿದೆ.