ನವದೆಹಲಿ: ಇನ್ನು ಮುಂದೆ ಪ್ರತಿ ವರ್ಷದ ಡಿಸೆಂಬರ್ 26 ಅನ್ನು “ವೀರ ಬಾಲ ದಿವಸ’ ಎಂದು ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಭಾನುವಾರ ಘೋಷಣೆ ಮಾಡಿದ್ದಾರೆ.
ಮೊಘಲ್ ಆಡಳಿತಗಾರರಿಂದ ಹತ್ಯೆಗೀಡಾದ ಸಿಖ್ ಸಮುದಾಯದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳ ಸ್ಮರಣಾರ್ಥ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ನ್ಯಾಯಕ್ಕಾಗಿ ಹುತಾತ್ಮರಾದವರಿಗೆ ಇದೊಂದು ಅರ್ಹ ಗೌರವ. ಸಿಖ್ ಸಮುದಾಯದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ
ಧರ್ಮಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಹೀಗಾಗಿ ಪ್ರತಿ ವರ್ಷದ ಡಿ.26ನ್ನು ವೀರ ಬಾಲ ದಿವಸ ಎಂದು ಆಚರಿಸಲಾಗುತ್ತದೆ’ ಎಂದು ಬರೆದಿದ್ದಾರೆ.