Advertisement
ನ.20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಛತ್ರಪತಿ ಸಾಂಭಾಜಿನಗರ, ರಾಯ್ಗಢ ಜಿಲ್ಲೆಯ ಪನ್ವೆಲ್, ಮುಂಬೈನಲ್ಲಿ ಬಿರುಸಿನ ಪ್ರಚಾರ ಸಭೆ ನಡೆಸಿದ್ದಾರೆ.
Related Articles
ಪನ್ವೆಲ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ದೇಶದಲ್ಲಿ ಬಡತನ ನಿವಾರಿಸಿ (ಗರೀಬಿ ಹಟಾವೋ) ಘೋಷಣೆ ಹೆಸರಲ್ಲಿ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳಿಂದ ಬಡತನ ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸುಳ್ಳು ಭರವಸೆ, ಘೋಷಣೆಗಳನ್ನು ನೀಡುತ್ತಾ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷ ಕಳೆದರೂ ಆಹಾರ, ವಸತಿಯಿಂದ ವಂಚಿತರಾಗಿದ್ದಾರೆ ಎಂದರು.
Advertisement
ತುಷ್ಟೀಕರಣವೇ ಎಂವಿಎ ಆದ್ಯತೆ: ಮೋದಿ ಟೀಕೆಮುಂಬೈನ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಹಾ ವಿಕಾಸ ಅಘಾಡಿಯ ನಾಯಕರಿಗೆ ತುಷ್ಟೀಕರಣವೇ ಆದ್ಯತೆ ಎಂದು ಟೀಕಿಸಿದರು. ಉದ್ಧವ್ ಠಾಕ್ರೆ ಬಣ ಶಿವಸೇನೆಯ ಹೆಸರೆತ್ತದೆ ಕೆಲವರು ಬಾಳಾ ಠಾಕ್ರೆಗೆ ಅವಮಾನ ಮಾಡಿ ಪಕ್ಷದ ನಿಯಂತ್ರಣವನ್ನು ಮತ್ತೂಬ್ಬರಿಗೆ ಹಸ್ತಾಂತರಿಸಿದರು ಎಂದರು. ನೀರಿನಿಂದ ಹೊರತೆಗೆದ ನೀರಿನಂತೆ ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ ಎಂದರು. ಪನ್ವೆಲ್ನಲ್ಲಿ ಪ್ರಧಾನಿ ಇಸ್ಕಾನ್
ಸದಸ್ಯರ ಸ್ವಾಗತ
ರಾಯ್ಗಢದ ಪನ್ವೆಲ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡಲು ಆಗಮಿಸಿದ ಪ್ರಧಾನಿ ಮೋದಿಯವರಿಗೆ ಇಸ್ಕಾನ್ ದೇಗುಲದ ಪ್ರತಿನಿಧಿಗಳು ಸ್ವಾಗತ ಕೋರಿದರು.