Advertisement
ಕೃಷ್ಣಂ ರಾಜು ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಅವರು ಕೃಷ್ಣಂ ರಾಜು ಮತ್ತು ಪ್ರಭಾಸ್ ರೊಂದಿಗಿನ ಚಿತ್ರವೊಂದನ್ನು ಪೋಸ್ಟ್ ಮಾಡಿ ” ಕೃಷ್ಣಂ ರಾಜು ಅವರ ನಿಧನದಿಂದ ದುಃಖವಾಗಿದೆ. ಮುಂಬರುವ ಪೀಳಿಗೆಗಳು ಅವರ ಚಿತ್ರರಂಗದ ಪ್ರತಿಭೆ ಮತ್ತು ಸೃಜನಶೀಲತೆಯನ್ನು ನೆನಪಿಸಿಕೊಳ್ಳುತ್ತವೆ. ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಬರೆದು ಕೊಂಡಿದ್ದಾರೆ.
Related Articles
Advertisement
ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ರೆಬೆಲ್ ಸ್ಟಾರ್ ಎಂದು ಕರೆಯಲ್ಪಡುವ ಕೃಷ್ಣಂ ರಾಜು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕಳೆದ 1966 ರಲ್ಲಿ ತೆಲುಗುಚಿತ್ರ ಚಿಲಕಾ ಗೋರಿಂಕಾ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿ ಐವತ್ತು ವರ್ಷಗಳ ಕಾಲ ಹಲವು ಚಿತ್ರಗಳಲ್ಲಿ ನಾಯಕನಾಗಿ ಪ್ರಧಾನ ಪಾತ್ರದಲ್ಲಿ ನಟಿಸಿ, ತಮ್ಮ ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿದ್ದರು,. ಕೃಷ್ಣಂ ರಾಜು ಅವರು ಬಾಹುಬಲಿ ಖ್ಯಾತಿಯ ಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ.