Advertisement

ಮಿಥಾಲಿ ಪಡೆಯ ಮನ್‌ ಕೀ ಬಾತ್‌

08:20 AM Jul 31, 2017 | Team Udayavani |

ಹೊಸದಿಲ್ಲಿ: ಎರಡು ದಿನಗಳ ಹಿಂದೆ ತನ್ನನ್ನು ಭೇಟಿಯಾಗಿದ್ದ ಮಹಿಳಾ ವಿಶ್ವಕಪ್‌ ರನ್ನರ್‌ಅಪ್‌ ಭಾರತ ಕ್ರಿಕೆಟ್‌ ಆಟಗಾರ್ತಿಯರನ್ನು ಅಭಿನಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಬಾನುಲಿ ಕಾರ್ಯಕ್ರಮ “ಮನ್‌ ಕೀ ಬಾತ್‌’ನಲ್ಲಿ ಮಿಥಾಲಿ ಪಡೆಯ ಸಾಧನೆಯನ್ನು ಕೊಂಡಾಡಿದ್ದಾರೆ.

Advertisement

“ನಮ್ಮ ಮಹಿಳಾ ಆಟಗಾರ್ತಿಯರು ವಿಶ್ವ ಕಪ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಹೀಗಿದ್ದರೂ ಭಾರತೀಯ ಆಟಗಾರ್ತಿಯರ ಮುಖದಲ್ಲಿ ಸಂತಸ ಕಾಣುತ್ತಿರಲಿಲ್ಲ. ಭಾರತ ಆಟ ಗಾರ್ತಿಯರು ಸೋತಿರಬಹುದು. ಆದರೆ 125 ಕೋಟಿ ಅಭಿಮಾನಿಗಳ ಹೃದಯ ಸಿಂಹಾಸವನ್ನು ಅಲಂಕರಿಸಿದ್ದೀರಿ’ ಎಂದು ಪ್ರಧಾನಿ ಮಿಥಾಲಿ ಪಡೆಯನ್ನು ಬೆಂಬಲಿಸಿ ಮಾತಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next