Advertisement

Ayodhya: ರಾಮ ಮಂದಿರ ಉದ್ಘಾಟನೆಗೂ ಮುನ್ನ ‘ರಾಮ ಭಜನ್’ಗೆ ಕರೆ ನೀಡಿದ ಪ್ರಧಾನಿ ಮೋದಿ

02:16 PM Dec 31, 2023 | Team Udayavani |

ಹೊಸದಿಲ್ಲಿ: ದೇಶವು ‘ವಿಕಸಿತ್ ಭಾರತ್’ ಮತ್ತು ಸ್ವಾವಲಂಬನೆಯಿಂದ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದರು. 2024 ರಲ್ಲೂ ಈ ಚೈತನ್ಯ ಮತ್ತು ಆವೇಗವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು.

Advertisement

ಮನ್ ಕಿ ಬಾತ್ ರೇಡಿಯೊ ಪ್ರಸಾರದ 108 ನೇ ಸಂಚಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದರು. ‘ಫಿಟ್ ಇಂಡಿಯಾ’ ಗಾಗಿ ಹಲವಾರು ಅನನ್ಯ ಪ್ರಯತ್ನಗಳನ್ನು ಎತ್ತಿ ತೋರಿಸಿದರು.

ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ನಟ ಅಕ್ಷಯ್ ಕುಮಾರ್ ತಮ್ಮ ಫಿಟ್‌ನೆಸ್ ಸಲಹೆಗಳನ್ನು ಹಂಚಿಕೊಂಡರು.

ಭಾರತವು ಆತ್ಮವಿಶ್ವಾಸದಿಂದ ತುಂಬಿದೆ ಮತ್ತು ‘ವಿಕಸಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ)’ ಮತ್ತು ಸ್ವಾವಲಂಬನೆಯ ಮನೋಭಾವದಿಂದ ತುಂಬಿದೆ ಎಂದು ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ಹೇಳಿದರು.

ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಇಡೀ ದೇಶವೇ ಉತ್ಸುಕವಾಗಿದೆ ಮತ್ತು ಜನರು ವಿಭಿನ್ನ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

Advertisement

“ಕಳೆದ ಕೆಲವು ದಿನಗಳಲ್ಲಿ ಶ್ರೀರಾಮ ಮತ್ತು ಅಯೋಧ್ಯೆಯ ಮೇಲೆ ಹೊಸ ಹಾಡುಗಳು ಮತ್ತು ಭಜನೆಗಳನ್ನು ರಚಿಸಿರುವುದನ್ನು ನೀವು ನೋಡಿರಬೇಕು. ಅನೇಕ ಜನರು ಹೊಸ ಕವಿತೆಗಳನ್ನು ಸಹ ಬರೆಯುತ್ತಿದ್ದಾರೆ” ಎಂದರು.

“ನನ್ನ ಸಾಮಾಜಿಕ ಜಾಲತಾಣಗಳಲ್ಲಿ ನಾನು ಕೆಲವು ಭಜನೆಗಳು ಮತ್ತು ಹಾಡುಗಳನ್ನು ಹಂಚಿಕೊಂಡಿದ್ದೇನೆ. ಕಲಾ ಪ್ರಪಂಚವು ತನ್ನ ವಿಶಿಷ್ಟ ಶೈಲಿಯಲ್ಲಿ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗುತ್ತಿದೆ” ಎಂದು ಅವರು ಹೇಳಿದರು.

“ಅಂತಹ ಎಲ್ಲಾ ರಚನೆಗಳನ್ನು ನಾವು ಸಾಮಾನ್ಯ ಹ್ಯಾಶ್‌ಟ್ಯಾಗ್‌ ನೊಂದಿಗೆ ಹಂಚಿಕೊಳ್ಳಬೇಕು ಎಂಬ ಆಲೋಚನೆ ನನ್ನ ಮನಸ್ಸಿಗೆ ಬರುತ್ತಿದೆ. ನಿಮ್ಮ ರಚನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ # SHRIRAMBHAJAN ನೊಂದಿಗೆ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next