ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಬಯೊಪಿಕ್ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಪರಿಗಣಿಸಬೇಕು ಎಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ತಿರಸ್ಕರಿಸಿದೆ.
“ಏನದು ಬಯೋಪಿಕ್ ? ನಾವಂತೂ ಅದನ್ನು ನೋಡಿಲ್ಲ. ಬಹುಷಃ ನಾವದನ್ನು ಈ ವಾರಾಂತ್ಯ ನೋಡವೆವು; ಅದಾದ ಬಳಿಕವೇ ನಿಮ್ಮ ಅರ್ಜಿಯನ್ನು ವಿಚಾರಿಸುವೆವು’ ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹೇಳಿತು.
ಮೋದಿ ಬಯೋಪಿಕ್ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬ ನಿಮ್ಮ ಕೋರಿಕೆಯನ್ನು ನಾವು ಕ್ರಮಾನುಸಾರ ವಿಚಾರಿಸುವೆವು ಎಂದು ಪೀಠ, ಅರ್ಜಿದಾರರ ವಕೀಲರಿಗೆ ಸ್ಪಷ್ಟಪಡಿಸಿತು.
ಇದೇ ಎಪ್ರಿಲ್ 5ರಂದು ತೆರೆ ಕಾಣುವುದೆಂದು ಹೇಳಲಾಗಿದ್ದ ಮೋದಿ ಬಯೋಪಿಕ್ ಚಿತ್ರದ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ನಿನ್ನೆ ಗುರುವಾರ ಹೇಳಿದ್ದರು.
ಮೋದಿ ಬಯೋಪಿಕ್ ಚಿತ್ರ ಬಿಡುಗಡೆಗೆ ತಡೆ ನೀಡಲು ಈ ಮೊದಲು ಮಧ್ಯಪ್ರದೇಶ ಮತ್ತು ಬಾಂಬ್ ಹೈಕೋರ್ಟ್ ನಿರಾಕರಿಸಿವೆ.