Advertisement

ವೈದ್ಯಕೀಯ ವೆಚ್ಚ ಸ್ವತಃ ಭರಿಸುತ್ತಿರುವ ಮೋದಿ

09:02 PM Jan 09, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ಹುದ್ದೆಗೇರಿದ 2014ರ ಮೇ 26ರಿಂದ ಇಲ್ಲಿಯ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈದ್ಯಕೀಯ ವೆಚ್ಚವನ್ನು ಸ್ವತಃ ಭರಿಸುತ್ತಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಿಡಿಗಾಸು ಪಡೆದಿಲ್ಲ ಎಂಬ ಅಂಶವು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

Advertisement

ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರಫ‌ುಲ್‌ ಸರ್ದಾರ್‌ ಈ ಕುರಿತು ಮಾಹಿತಿಗಾಗಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. 2014ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ ಅವರಿಗಾಗಿ ಯಾವುದೇ ವೆಚ್ಚವನ್ನು ಭರಿಸಿಲ್ಲ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತವಾಗಿ ತಿಳಿಸಿದೆ.

ಸಾಮಾನ್ಯವಾಗಿ ಸಂಸದರಿಗೆ ವೈದ್ಯಕೀಯ ವ್ಯವ ಸ್ಥೆ ಸೇರಿದಂತೆ ಹಲವಾರು ಉಚಿತ ಸೌಲಭ್ಯಗಳಿವೆ. ಇಂಥ ಸೌಲಭ್ಯಗಳಿದ್ದರೂ ಪ್ರಧಾನಿ ಮೋದಿ ಬಳಸಿಕೊಳ್ಳದೆ ಕೈಯಿಂದಲೇ ಹಣ ಭರಿಸಿದ್ದಾರೆ ಎಂದು ಪಿಎಂಒ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next