Advertisement

ಅವಧಿಗೂ ಮೊದಲೇ ಬುಲೆಟ್‌ ರೈಲು ಹಳಿಗೆ: ಪ್ರಧಾನಿ ಮೋದಿ

01:21 AM Feb 19, 2022 | Team Udayavani |

ಮುಂಬಯಿ: ವಾಣಿಜ್ಯ ನಗರಿ ಮುಂಬಯಿ ಮತ್ತು ಅಹ್ಮದಾಬಾದ್‌ ನಡುವೆ ಸಂಚಾರ ಮಾಡಲಿರುವ ಬುಲೆಟ್‌ ರೈಲಿನ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಮುಂಬಯಿಯ ಥಾಣೆ ಮತ್ತು ದಿವಾ ನಡುವೆ 2 ಹೆಚ್ಚುವರಿ ರೈಲ್ವೇ ಹಳಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿ ಸಿದ ಪ್ರಧಾನಿ ಈ ಮಾತನ್ನಾಡಿದ್ದಾರೆ.

“1,10,000 ಕೋಟಿ ರೂ.ವೆಚ್ಚದಲ್ಲಿ 508 ಕಿ.ಮೀ ಹೈ ಸ್ಪೀಡ್‌ ಕಾರಿಡಾರ್‌ ನಿರ್ಮಿಸುವುದು ನಮ್ಮ ಆದ್ಯತೆ. ಇದರಿಂದಾಗಿ ಇಲ್ಲಿನ ಮೂಲಸೌಕರ್ಯ ಸಾಮರ್ಥ್ಯ ಹೆಚ್ಚುವುದರ ಜತೆ ಮುಂಬಯಿ ಕನಸಿನ ನಗರಿಯಾಗಲಿದೆ’ ಎಂದರು.

ಹಾಗೆಯೇ ಆತ್ಮನಿರ್ಭರ ಭಾರತದ ಕನಸು ನನಸಾಗಬೇ ಕೆಂದರೆ ಮುಂಬಯಿಯ ಸಾಮರ್ಥ್ಯ ಹೆಚ್ಚಬೇಕು. ಹಾಗಾಗಿಯೇ ಇಲ್ಲಿ 21ನೇ ಶತಮಾನದ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಲಾಗು ತ್ತಿದೆ. ಈಗ ಆರಂಭಿಸಿರುವ ಎರಡು ಹೊಸ ಹಳಿಗಳಿಂದಾಗಿ ಇಲ್ಲಿನ ಜನಜೀವನ ಇನ್ನಷ್ಟು ಸುಧಾರಿಸಲಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next