Advertisement

ಮೋದಿನಾಮಿಕ್ಸ್‌ : ಪ್ರಧಾನಿ ಮೋದಿಗೆ 2018ರ ಸೋಲ್‌ ಶಾಂತಿ ಪುರಸ್ಕಾರ

11:45 AM Oct 24, 2018 | udayavani editorial |

ಹೊಸದಿಲ್ಲಿ : ಮೋದಿನಾಮಿಕ್ಸ್‌ ಮೂಲಕ ಭಾರತದಲ್ಲಿ ಮತ್ತು ವಿಶ್ವದಲ್ಲಿ  ಅತ್ಯಧಿಕ ಆರ್ಥಿಕ ಬೆಳವಣಿಗೆಗೆ ನೀಡಿದ ಕಾಣಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018ರ ಸೋಲ್‌ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.

Advertisement

ವಿಶ್ವ ಶಾಂತಿ, ಮಾನವ ಅಭಿವೃದ್ಧಿ ಸುಧಾರಣೆ ಮತ್ತು ಭಾರತದಲ್ಲಿ ಪ್ರಜಾಸತ್ತೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ನೀಡಿದ ಕಾಣಿಕೆಯನ್ನೂ ಪರಗಣಿಸಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ಸಂದಿದೆ. 

ಈ ಪ್ರಶಸ್ತಿಯನ್ನು ಪಡೆದವರಲ್ಲಿ ಮೋದಿ ಅವರ ಹದಿನಾಲ್ಕನೇಯವರಾಗಿದ್ದಾರೆ ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವಾಲಯ ಇಂದು ಬುಧವಾರ ಹೇಳಿದೆ.

ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಸಹಕಾರ ಸುಧಾರಣೆ, ಜಾಗತಿಕ ಆರ್ಥಿಕತೆಯ ಬೆಳವಣಿಗೆ, ಭಾರತದಲ್ಲಿ ಮಾನವ ಅಭಿವೃದ್ಧಿ ಸುಧಾರಣೆ ಮತ್ತು ಭಾರತವನ್ನು ವಿಶ್ವದ ಅತ್ಯಂತ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ದೇಶವನ್ನಾಗಿ ಪರಿವರ್ತಿಸುವಲ್ಲಿ ಗೈದಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ಸೋಲ್‌ ಶಾಂತಿ ಪುರಸ್ಕಾರ ಸಮಿತಿಯು ಹೇಳಿರುವುದಾಗಿ ಭಾರತ ಸರಕಾರ ತಿಳಿಸಿದೆ. 

ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿಗ್ರಹ ಉಪಕ್ರಮಗಳು ಮತ್ತು ನೋಟು ಅಮಾನ್ಯದಂತಹ ದಿಟ್ಟ ಕ್ರಮಗಳಿಂದ ಸರಕಾರವನ್ನು ಪರಿಶುದ್ಧಗೊಳಿಸಲು ನಡೆಸಿರುವ ಯತ್ನಗಳನ್ನು  ಪ್ರಶಸ್ತಿ ಸಮಿತಿಯು ಪ್ರಶಂಸಿಸಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next