Advertisement

ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ; ಯಾರೆಲ್ಲ ಭಾಗವಹಿಸಲಿದ್ದಾರೆ

11:37 AM Aug 05, 2020 | Karthik A |

ಅಯೋಧ್ಯೆ: ಭೂಮಿ ಪೂಜೆಗೆ 135 ಜನ ಸಂತರು ಹಾಗೂ 40 ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.

Advertisement

ಈ ಮೂಲಕ ಒಟ್ಟು 175 ಮಂದಿಗೆ ರಾಮಮಂದಿರದ ಭೂಮಿ ಪೂಜೆಯನ್ನು ಹತ್ತಿರದಿಂದ ನೋಡುವ ಭಾಗ್ಯವನ್ನು ಕರುಣಿಸಲಾಗಿದೆ.

135 ಸಂತರ ಪೈಕಿ 135 ಸಂತರು ಭಾರತ ಮತ್ತು ನೇಪಾಲದವರಾಗಿದ್ದು, 36 ಪಂಥಗಳನ್ನು ಅನುಸರಿಸುವವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಅಯೋಧ್ಯೆಯನ್ನು ತಲುಪಿದ್ದಾರೆ.

ನೇಪಾಲದ ಜನಕ್ಪುರದ ಸಂತರನ್ನೂ ಆಹ್ವಾನಿಸಲಾಗಿದೆ. ಆದರೆ ಕೊರೊನಾ ಕಾರಣದಿಂದ ಸಂಭಾವ್ಯ ಆರೋಗ್ಯ ಅಪಾಯಗಳನ್ನು ದೂರವಿರಿಸುವ ಹಿತದೃಷ್ಟಿಯಿಂದ ಬಿಜೆಪಿಯ ವರಿಷ್ಠರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಶಿ ಅವರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಅವರು ಲೈವ್‌ ಮೂಲಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರಯ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ಪ್ರಕಾರ, ಆಮಂತ್ರಣಗಳು ಮತ್ತು ಆಹ್ವಾನಿತರ ಸಂಪೂರ್ಣ ಪಟ್ಟಿಯನ್ನು ಅಡ್ವಾಣಿ, ಜೋಶಿ ಮತ್ತು ವಕೀಲ ಕೆ.ಕೆ. ಪರಾಶರನ್‌ ಅವರೊಂದಿಗೆ ಸಮಾಲೋಚಿಸಿದ ಬಳಿಕ ಮಾಡಲಾಗಿದೆಯಂತೆ.

Advertisement

ವೇದಿಕೆಯಲ್ಲಿ ಯಾರೆಲ್ಲಾ
ಪ್ರಧಾನಿ ನರೇಂದ್ರ ಮೋದಿ, ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್‌ ಪಟೇಲ್‌, ಮಹಂತ್‌ ನರ್ತ್ಯ ಗೋಪಾಲ್ದಾಸ್‌ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವೇದಿಕೆಯಲ್ಲಿ ಉಪಸ್ಥಿತಲಿರಲಿದ್ದಾರೆ. ಇಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಶಿಷ್ಟಾಚಾರದ ಅನ್ವಯ ವೇದಿಕೆಯಲ್ಲಿ ಸ್ಥಾನ ನೀಡಲಾಗಿದೆ.

ಆದರೆ ಇಲ್ಲಿ ಯೋಗಿ ಆದಿತ್ಯನಾಥ್‌ ಹೊರತುಪಡಿಸಿ ಎಲ್ಲರೂ 60 ವರ್ಷ ದಾಟಿದವರೇ ಆಗಿದ್ದಾರೆ. ವಿಎಚ್‌ಪಿ ಪ್ರಮುಖ ನಾಯಕ ಅಶೋಕ್‌ ಸಿಂಘಾಲ್‌ ಅವರ ಕುಟುಂಬದಿಂದ ಅವರ ಸೋದರ ಅಳಿಯರಾದ ಪವನ್‌ ಸಿಂಘಾಲ್‌ ಮತ್ತು ಮಹೇಶ್‌ ಭಾಗಚಂದ್ಕಾ ಅವರು ಈ ಭೂಮಿಪೂಜೆಯ ಯಜಮಾನ್‌ ಆಗಿರುತ್ತಾರೆ.

ರಾಮ ಮಂದಿರ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರೂ ಹಾಗೂ ಅಡ್ವಾಣಿಯವರ ಆಪೆ¤ಯಾಗಿರುವ ಉಮಾ ಭಾರತಿ ಅವರು ಅಯೋಧ್ಯೆ ತಲುಪಿದ್ದಾರೆ. ಈ ಹಿಂದೆ ಅವರು ಭೂಮಿಪುಜನ್‌ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದರೂ, ಕೊನೆಯ ಕ್ಷಣದಲ್ಲಿ ಅವರು ಟ್ವೀಟ್‌ ಮಾಡಿ ನಾನು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಭಾಗವಹಿಸಲಿರುವ ಗಣ್ಯರು
ಉಮಾ ಭಾರತಿ ಅವರಲ್ಲದೆ, ಬಿಜೆಪಿ ನಾಯಕರಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಸದ ಲಲ್ಲು ಸಿಂಗ್‌, ಬಿಜೆಪಿ ನಾಯಕ ಮತ್ತು ಜನ್ಮಭೂಮಿ ಚಳವಳಿಯ ಪ್ರಮುಖ ಪಾತ್ರಧಾರಿಗಳು ವಿನಯ್‌ ಕಟಿಯಾರ್‌, ಯುಪಿ ಉಪಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್‌ ಮತ್ತು ದಿನೇಶ್‌ ಶರ್ಮಾ, ಯುಪಿಯ ಸಂಪುಟ ಸಚಿವರಾದ ಸುರೇಶ್‌ ಖನ್ನಾ ನಾರಾಯಣ್‌ ಸಿಂಗ್‌, ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ಮತ್ತು ಜೈಭನ್‌ ಸಿಂಗ್‌ ಪೊವಾಯಾ ಅವರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬಾಬಾ ರಾಮದೇವ್‌, ವಿಎಚ್‌ಪಿ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಅಲೋಕ್‌ ಕುಮಾರ್‌, ಸದಾಶಿವ್‌ ಕೊಕ್ಜೆ, ಪ್ರಕಾಶ್‌ ಶರ್ಮಾ, ಮಿಲಿಂದ್‌ ಪರಂಡೆ, ರಾಮ್ ವಿಲಾಸ್‌ ವೇದಾಂತಿ ಮತ್ತು ಜಿತೇಂದ್ರನಂದ ಸರಸ್ವತಿ ಅವರಲ್ಲದೆ, ವಿಶ್ವ ಹಿಂದೂ ಪರಿಷತ್ತಿನ ಹೈ ಪವರ್‌ ಕಮಿಟಿಯಲ್ಲಿ 40ರಿಂದ 50 ಜನರು ಭಾಗವಹಿಸಬಹುದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರೇಶ್‌ ಭಯಾಜಿ ಜೋಶಿ, ವಿಎಚ್‌ಪಿಯ ದಿನೇಶ್‌ ಚಂದ್‌, ಕೃಷ್ಣ ಗೋಪಾಲ, ಇಂದ್ರೇಶ್‌ ಕುಮಾರ್‌ ಅವರು ಉಪಸ್ಥಿತರಿರಲಿದ್ದಾರೆ.

ಶ್ರೀ ರಾಮ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಹಂತ್‌ ನರ್ತ್ಯ ಗೋಪಾಲ್‌ ದಾಸ್‌, ಸ್ವಾಮಿ ಗೋವಿಂದ್‌ ದೇವ್‌ ಗಿರಿ, ಚಂಪತ್‌ ರಾಯ…, ನೃಪೇಂದ್ರ ಮಿಶ್ರಾ, ಸ್ವಾಮಿ ವಾಸುದೇವ್‌ ಸರಸ್ವತಿ, ಅಯೋಧ್ಯ ರಾಜಮನೆತನದ ಮುಖ್ಯಸ್ಥರಾದ ವಿಮೋಲೇಂದ್ರ ಪ್ರತಾಪ್‌ ಮಿಶ್ರಾ, ಅನಿಲ್‌ ಮಿಶ್ರಾಸ್‌, ಕಮಲೆಸ್‌ ಚೌಪಲ್‌, ಮಹಂತ್‌ ದೀನೇಂದ್ರ ದಾಸ್‌, ಗೃಹ ಸಚಿವಾಲಯದ ಗ್ಯಾನೇಶ್‌ ಕುಮಾರ್‌, ರಾಜ್ಯ ಸರಕಾರದ ಸಚಿವರಾದ ಅವ್ನಿಶ್‌ ಅವಸ್ಥಿ ಮತ್ತು ಅಯೋಧ್ಯೆಯ ಜಿಲ್ಲಾಧಿಕಾರಿ ಅನುಜ್‌ ಜಾ ಭಾಗವಹಿಸಲಿದ್ದಾರೆ.

ಅಖರಾ ಪರಿಷತ್‌ನ ನರೇಂದ್ರ ಗಿರಿ, ಸಾಧ್ವಿ ರಿತಂಭರ, ಯೋಗ ಗುರು ರಾಮದೇವ್‌, ಶ್ರೀ ರವಿಶಂಕರ್‌ ಗುರೂಜಿ,, ಯುಗಪುರುಷ ಪರಮಾನಂದ್‌, ಮುಸ್ಲಿಂಮರ ಕಡೆಯಿಂದ ಹಾಶಿಮ್‌ ಅನ್ಸಾರಿ ಅವರ ಪುತ್ರ ಇಕ್ಬಾಲ್‌ ಅನ್ಸಾರಿ ಅವರನ್ನು ಆಹ್ವಾನಿಸಲಾಗಿದೆ. ಅವರಲ್ಲದೆ, ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಟ್ಟ ಇನ್ನೊಬ್ಬ ಮುಸ್ಲಿಂ ಪದ್ಮಶ್ರೀ ಮೊಹಮ್ಮದ್‌ ಷರೀಫ್ ಅವರು.

ಕೊರೊನಾ ಕಾರಣ ಹೊರಡಿಸಲಾದ ಮಾರ್ಗಸೂಚಿ ಮತ್ತು ತಮ್ಮ ಆರೋಗ್ಯದ ಕಾರಣದಿಂದ ಅಡ್ವಾಣಿ ಮತ್ತು ಜೋಶಿ ಅವರು ಆಗಮಿಸುತ್ತಿಲ್ಲ. ಅವರ ಜತೆ ಶಂಕರಾಚಾರ್ಯರ ಆದಿಯಾಗಿ ಹಲವು ಸಂತರು ತಮ್ಮ ಚತುರ್ಮಾಸದ ಕಾರಣದಿಂದಾಗಿ ಬರಲು ಸಾಧ್ಯವಾಗುತ್ತಿಲ್ಲ. ಇನ್ನು ಈ ರ್ಕಾಕ್ರಮಕ್ಕೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next