Advertisement

ಜನಸ್ನೇಹಿ, ಅಭಿವೃದ್ಧಿ ಪರ ಬಜೆಟ್‌;ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

01:02 AM Feb 02, 2022 | Team Udayavani |

ಹೊಸದಿಲ್ಲಿ: ಇದೊಂದು ಜನಸ್ನೇಹಿ, ಅಭಿವೃದ್ಧಿ ಪರ ಬಜೆಟ್‌ ಆಗಿದ್ದು, ಇದರಿಂದ ಮೂಲಸೌಕರ್ಯ, ಹೂಡಿಕೆ, ಪ್ರಗತಿ ಮತ್ತು ಉದ್ಯೋಗ ಸೃಷ್ಟಿಗೆ ವಿಫ‌ುಲ ಅವಕಾಶಗಳು ಸಿಗಲಿವೆ…

Advertisement

– ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಬಗ್ಗೆ ಪ್ರಧಾನಿ ಮೋದಿ ಅವರ ಶ್ಲಾಘನೆ. ನಿರ್ಮಲಾ ಬಜೆಟ್‌ ಭಾಷಣ ಮುಗಿದ ಬಳಿಕ ದೂರದರ್ಶನದ ಮೂಲಕ ಮಾತನಾಡಿದ ಅವರು, ಬಡವರ ಏಳಿಗೆಗೂ ಈ ಬಜೆಟ್‌ ನೆರವಾಗಲಿದೆ ಎಂದರು. ಅಲ್ಲದೆ ಇದು ಜನಸಾಮಾನ್ಯನ ವರ್ತಮಾನದ ಸಮಸ್ಯೆಗಳನ್ನು ನಿವಾರಿಸಿ, ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಬಡವರಿಗೆ ಪಕ್ಕಾ ಮನೆಗಳು, ಶೌಚಾಲಯ, ಮನೆ ಮನೆಗೂ ನಲ್ಲಿ, ಅನಿಲ ಸಂಪರ್ಕ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಹಾಗೆಯೇ ಆಧುನಿಕ ಇಂಟರ್ನೆಟ್‌ ಸಂಪರ್ಕವನ್ನೂ ಕಲ್ಪಿಸಲು ನೆರವಾಗಲಿದೆ.

ಶತಮಾನಕ್ಕೆ ಒಮ್ಮೆ ಎದುರಾಗುವ ಸಂಕಷ್ಟಗಳ ನಡುವೆ ಜನರಲ್ಲಿ ಅಭಿವೃದ್ಧಿಯ ಆತ್ಮವಿಶ್ವಾಸ ಮೂಡಿಸುವಲ್ಲಿ ಈ ಬಜೆಟ್‌ ನೆರವಾಗಿದೆ. ಅಲ್ಲದೆ ಜನರಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿ, ಆರ್ಥಿಕತೆಯ ಚೇತರಿಕೆಗೂ ಕಾರಣವಾಗಿದೆ ಎಂದು ಪ್ರಧಾನಿ ಅಭಿನಂದಿಸಿದರು. ಬಜೆಟ್‌ನಲ್ಲಿ ಹೆಚ್ಚು ಹೆಚ್ಚು ಮೂಲಸೌಕರ್ಯ, ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗಳನ್ನು ಸೃಷ್ಟಿ ಮಾಡುವ ಅವಕಾಶಗಳು ವಿಪುಲವಾಗಿವೆ. ಹಾಗೆಯೇ ಈ ಬಜೆಟ್‌ನಿಂದ ವರ್ತಮಾನದ ಸಮಸ್ಯೆಗಳು ಅಳಿಯುವುದಲ್ಲದೆ ಯುವಕರಿಗೆ ಉಜ್ವಲ ಭವಿಷ್ಯವನ್ನು ತೋರಿಸಿಕೊಡಲಿದೆ ಎಂದರು.

ರೈತರ ಅನುಕೂಲಕ್ಕಾಗಿ ಡ್ರೋನ್‌ ತಂತ್ರಜ್ಞಾನವನ್ನು ಜಾರಿ ಮಾಡಿ ಆಧುನಿಕತೆಯನ್ನು ತರಲಾಗುತ್ತಿದೆ. ವಂದೇ ಭಾರತ ರೈಲುಗಳು, ಡಿಜಿಟಲ್‌ ಕರೆನ್ಸಿ, 5ಜಿ ಸೇವೆಗಳು, ರಾಷ್ಟ್ರೀಯ ಡಿಜಿಟಲ್‌ ಆರೋಗ್ಯದ ವ್ಯವಸ್ಥೆಗಳಿಂದ ಯುವಕರು, ಮಧ್ಯಮ ವರ್ಗ, ಬಡವರು, ದಲಿತರು ಮತ್ತು ಇತರ ಹಿಂದುಳಿದ ವರ್ಗ

Advertisement

ಗಳಿಗೆ ಅನುಕೂಲವಾಗುತ್ತದೆ. ಎಂಎಸ್‌ಪಿಗಾಗಿ 2.25 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಅಲ್ಲದೆ ಎಂಎಸ್‌ಎಂಇಗಳಿಗೆ ಸಾಲದ ಖಾತರಿಯನ್ನು ಹೆಚ್ಚಿಸಲಾಗಿದೆ. ರಕ್ಷಣ ವೆಚ್ಚದಲ್ಲಿ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕ ಹೂಡಿಕೆಯ ಮೇಲಿನ ವೆಚ್ಚವನ್ನು 7.5 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next