Advertisement

ಮತ್ತೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ

05:38 PM Apr 02, 2023 | Team Udayavani |

ಹೊಸದಿಲ್ಲಿ: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಇತರ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅವರು ಶೇಕಡಾ 76 ರ ಅನುಮೋದನೆಯನ್ನು ಪಡೆದಿದ್ದಾರೆ. ಆದರೆ, ಫೆಬ್ರವರಿಯಲ್ಲಿ ಶೇ.78 ರಷ್ಟಿದ್ದ ಪಿಎಂ ಮೋದಿ ರೇಟಿಂಗ್‌ ನಲ್ಲಿ ಸ್ವಲ್ಪ ಇಳಿಕೆಯಾಗಿದೆ.

Advertisement

ಮಾರ್ನಿಂಗ್ ಕನ್ಸಲ್ಟ್‌ ನ ಇತ್ತೀಚಿನ ಸಮೀಕ್ಷೆಯು 76 ಪ್ರತಿಶತದಷ್ಟು ಅನುಮೋದನೆಯ ರೇಟಿಂಗ್‌ ನೊಂದಿಗೆ ಎಲ್ಲಾ ಜಾಗತಿಕ ನಾಯಕರ ನಡುವೆ ಪಿಎಂ ಮೋದಿ ಎತ್ತರವಾಗಿ ನಿಂತಿದ್ದಾರೆ ಎಂದು ತೋರಿಸಿದೆ.

ಜನಪ್ರಿಯತೆಯ ವಿಷಯದಲ್ಲಿ ಯಾವುದೇ ವಿಶ್ವ ನಾಯಕ ಪ್ರಧಾನಿ ಮೋದಿಯ ಹತ್ತಿರವೂ ಇಲ್ಲ ಎಂದು ಅನುಮೋದನೆ ರೇಟಿಂಗ್ ತೋರಿಸುತ್ತದೆ. ರೇಟಿಂಗ್ ಪ್ರಕಾರ, ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 61 ಶೇಕಡಾ ಅನುಮೋದನೆ ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಒಬ್ರಡಾರ್ ನಡುವೆ ಶೇ 15ರಷ್ಟು ಅಂತರವಿದೆ.

ಇದನ್ನೂ ಓದಿ:ವಿಪಕ್ಷ ಮೈತ್ರಿಕೂಟದ ಸಂಚಾಲಕರಾಗಲು ಸಣ್ಣ ಪಕ್ಷವನ್ನು ಪ್ರೋತ್ಸಾಹಿಸುತ್ತೇನೆ: ತರೂರ್

ಈ ಮಾರ್ನಿಂಗ್ ಕನ್ಸಲ್ಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 55 ಪ್ರತಿಶತದಷ್ಟು ಜಾಗತಿಕ ನಾಯಕರ ಅನುಮೋದನೆಯನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಇಟಲಿಯ ಪಿಎಂ ಜಾರ್ಜಿಯಾ ಮೆಲೋನಿ ಅವರು ಶೇಕಡಾ 49 ರ ಅನುಮೋದನೆಯನ್ನು ಪಡೆದಿದ್ದಾರೆ. ಮೆಲೋನಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರು ಜಾರ್ಜಿಯಾ ಮೆಲೋನಿಯಂತೆ 49 ಶೇಕಡಾ ರೇಟಿಂಗ್ ಪಡೆದಿದ್ದಾರೆ ಆದರೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

Advertisement

ವಿಶ್ವದ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ. ಬಿಡೆನ್ ಕೇವಲ ಶೇಕಡ 41ರಷ್ಟು ಅನುಮೋದನೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next