Advertisement
ಪ್ರಧಾನಿ ಮೋದಿ ಅವರು ಸಿದ್ಧಾರ್ಥನಗರ ಜಿಲ್ಲೆಯಿಂದ ವೈದ್ಯಕೀಯ ಕಾಲೇಜುಗಳನ್ನು ಆನ್ಲೈನ್ ಮೂಲಕ ಉದ್ಘಾಟಿಸಿದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಸ್ಥಿತರಿದ್ದರು.
Related Articles
Advertisement
”ಜನರು ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಓಡಬೇಕಾಗಿತ್ತು, ಆದರೆ ಹೊಸ ವೈದ್ಯಕೀಯ ಕಾಲೇಜುಗಳೊಂದಿಗೆ, ಆ ದಿನಗಳು ಮುಗಿದಿವೆ” ಎಂದರು.
2,329 ಕೋಟಿ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸಿದ್ಧಾರ್ಥನಗರ, ಇಟಾಹ್, ಹರ್ದೋಯಿ, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಗಾಜಿಪುರ, ಮಿರ್ಜಾಪುರ್ ಮತ್ತು ಜೌನ್ಪುರ್ ಜಿಲ್ಲೆಗಳಲ್ಲಿ ನಿರ್ಮಿಸಲಾಗಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಮಾಹಿತಿಗಳ ಪ್ರಕಾರ, ಎಂಟು ವೈದ್ಯಕೀಯ ಕಾಲೇಜುಗಳನ್ನು ಜಿಲ್ಲಾ ಅಥವಾ ರೆಫರಲ್ ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಕೇಂದ್ರದ ಪ್ರಾಯೋಜಿತ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ ಮತ್ತು ಜೌನ್ಪುರದಲ್ಲಿನ ಕಾಲೇಜನ್ನು ರಾಜ್ಯ ಸರಕಾರವು ತನ್ನ ಸ್ವಂತ ಸಂಪನ್ಮೂಲಗಳ ಮೂಲಕ ಕಾರ್ಯಗತಗೊಳಿಸಿದೆ.