Advertisement

ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಮೋದಿ ಸಲಹೆ

11:24 PM Nov 10, 2020 | mahesh |

ಹೊಸದಿಲ್ಲಿ: “ಪ್ರತಿಯೊಂದು ಸದಸ್ಯ ರಾಷ್ಟ್ರವೂ ಪರಸ್ಪರರ ಪ್ರಾದೇಶಿಕ ಸಮಗ್ರತೆ ಯನ್ನು ಗೌರವಿಸಬೇಕು’. ಗಡಿಯಲ್ಲಿ ಕಿರಿಕ್‌ ಮಾಡುತ್ತಿರುವ ಚೀನ ಮತ್ತು ಪಾಕಿಸ್ಥಾನಕ್ಕೆ ಇಂಥದ್ದೊಂದು ಸ್ಪಷ್ಟ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ.

Advertisement

ಮಂಗಳವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಶಾಂಘೈ ಸಹಕಾರ ಸಂಘ(ಎಸ್‌ಸಿಒ)ದಲ್ಲಿ ಮಾತನಾಡಿದ ಅವರು, “ಎಸ್‌ಸಿಒ ದೇಶಗಳೊಂದಿಗೆ ಭಾರತವು ಬಲಿಷ್ಠ ಸಾಂಸ್ಕೃತಿಕ ಮತ್ತು ಐತಿ ಹಾಸಿಕ ಸಂಬಂಧವನ್ನು ಹೊಂದಿದೆ. ನಮ್ಮ ನಡುವಿನ ಸಂಪರ್ಕ, ಬಾಂಧವ್ಯ ವೃದ್ಧಿಸ ಬೇಕೆಂದರೆ ಪರಸ್ಪರರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸ ಬೇಕು’ ಎಂದಿದ್ದಾರೆ. ವಿಶೇಷ ವೆಂದರೆ, ಚೀನ ಅಧ್ಯಕ್ಷ ಜಿನ್‌ಪಿಂಗ್‌, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಮ್ಮುಖದಲ್ಲೇ ಮೋದಿ ಈ ಖಡಕ್‌ ಸಂದೇಶ ರವಾನಿಸಿದ್ದಾರೆ.

ಶಾಂಘೈನ ಸ್ಫೂರ್ತಿಯ ಉಲ್ಲಂಘನೆ ಎಸ್‌ಸಿಒ ಅಜೆಂಡಾದಲ್ಲಿ ಅನಗತ್ಯವಾಗಿ ದ್ವಿಪಕ್ಷೀಯ ವಿಚಾರಗಳನ್ನು ಎಳೆದು ತರುವುದು ಅತ್ಯಂತ ದುರದೃಷ್ಟಕರ. ಇದು ಎಸ್‌ಸಿಒ ನಿಯಮಾವಳಿ ಮತ್ತು ಶಾಂಘೈನ ಸ್ಫೂರ್ತಿಯ ಉಲ್ಲಂಘನೆಯೂ ಹೌದು ಎಂದೂ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next