Advertisement

PM Modi: 36 ಗಂಟೆಗಳು, 5 ಸಾವಿರ ಕಿ.ಮೀ, 8 ಕಾರ್ಯಕ್ರಮಗಳು, 7 ಮಹಾನಗರಗಳು…

05:33 PM Apr 22, 2023 | Team Udayavani |

ನವದೆಹಲಿ: 36 ಗಂಟೆಗಳು, 5,000 ಕ್ಕೂ ಹೆಚ್ಚು ಕಿ.ಮೀ ಸುತ್ತಾಟ, 8 ಕಾರ್ಯಕ್ರಮಗಳು, 7 ಮಹಾನಗರಗಳು… ಇದು ಪ್ರಧಾನಿ ಮೋದಿಯವರ ಇನ್ನು ಎರಡು ದಿನಗಳ ಟೈಂ ಲೈನ್‌.

Advertisement

ಎ. 24 ರ ಮುಂಜಾನೆ ರಾಷ್ಟ್ರ ರಾಜಧಾನಿಯಿಂದ ತಮ್ಮ ಪ್ರಯಾಣ ಪ್ರಾರಂಭಿಸಲಿರುವ ಪ್ರಧಾನಿ, ನೇರವಾಗಿ ದೆಹಲಿಯಿಂದ 500 ಕಿ.ಮೀ  ದೂರದಲ್ಲಿರುವ ಮಧ್ಯ ಪ್ರದೇಶದ ಖಜರಾಹೋಗೆ ತೆರಳಲಿದ್ದಾರೆ. ಅಲ್ಲಿಂದ ಅವರು ರೇವಾಗೆ ತೆರಳಿ ರಾಷ್ಟ್ರೀಯ ಪಂಚಾಯತ್‌ ದಿನದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮತ್ತೆ ಖಜರಾಹೋಗೆ ತೆರಳಲಿದ್ದಾರೆ. ಈ ಎರಡೂ ನಗರಗಳ ನಡುವಿನ ಅವರ ಸಂಚಾರ ಸುಮಾರು 280 ಕಿ.ಮೀ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಜರಾಹೋದಿಂದ ಮೋದಿ ದೇವನಾಡು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಖಜರಾಹೋದಿಂದ ಹೊರಟು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ʻಯುವಂ ಕಾನ್ಕ್ಲೇವ್‌ʼ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಅವರು ವಿಮಾನದಲ್ಲಿ ಸುಮಾರು 1700 ಕಿ.ಮೀ ದೂರ ಪ್ರಯಾಣಿಸಲಿದ್ದಾರೆ.

ಎ. 25 ರಂದು ಮುಂಜಾನೆ ಮೋದಿಯವರು ಕೊಚ್ಚಿಯಿಂದ ನೇರವಾಗಿ ಕೇರಳ ರಾಜಧಾನಿ ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ. ಇದರ ಅಂತರ ಸುಮಾರು 190 ಕಿ.ಮೀ.  ತಿರುವನಂತಪುರದಲ್ಲಿ ಪ್ರಧಾನಿ ಮೋದಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅದರ ಜೊತೆಗೆ ಹಲವು ಅಭಿವೃದ್ದಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.

Advertisement

ತಿರುವನಂತಪುರದಿಂದ ಸೂರತ್‌ ಮೂಲಕ ಸಿಲ್ವಸ್ಸಾಗೆ ಪ್ರಧಾನಿ ತೆರಳಲಿದ್ದಾರೆ. ಈ ಪ್ರಯಾಣವು ಸುಮಾರು 1570 ಕಿ.ಮೀ ಅಂತರವನ್ನು ಹೊಂದಿರಲಿದೆ. ಅಲ್ಲಿ ಅವರು ನಮೋ ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಅಲ್ಲಿಯೂ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.

ಅಲ್ಲಿಂದ ಮೋದಿ ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ದಾಮನ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿ ದೇವಕಾ ಸಮುದ್ರ ದಂಡೆ ಅಭಿವೃದ್ಧಿ ಕಾರ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲಿಂದ 110 ಕಿ.ಮೀ ದೂರದ ಸೂರತ್‌ಗೆ ತೆರಳಲಿದ್ದಾರೆ.

ಸೂರತ್‌ನಿಂದ ಮತ್ತೆ ದೆಹಲಿಗೆ ತೆರಳಲಿದ್ದು, ಈ ಪ್ರಯಾಣ 940 ಕಿ.ಮೀ ದೂರವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್

ಒಟ್ಟಾರೆಯಾಗಿ ಈ ಎರಡು ದಿನಗಳಲ್ಲಿ ಪ್ರಧಾನಿ ಮೋದಿಯವರು ಸುಮಾರು 5,300 ಕಿ.ಮೀ ಸಂಚರಿಸಲಿದ್ದು, ಸುಮಾರು 36 ಗಂಟೆಗಳ  ಕಾರ್ಯಕ್ರಮಗಳು ಈ ಪಟ್ಟಿಯಲ್ಲಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next