ನಾಸಿಕ್: ಪಿಎಂ ಕಿಸಾನ್ ಯೋಜನೆಯ ನಕಲಿ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ನಾಸಿಕ್ ಜಿಲ್ಲಾಡಳಿತ ಇಲ್ಲಿಯ ತನಕ 11 ಸಾವಿರ ಮಂದಿಗೆ ನೋಟಿಸ್ ನೀಡಿದೆ.
ಬಡ ರೈತರಿಗಾಗಿ ಜಾರಿಗೊಳಿಸಲಾದ ಕಿಸಾನ್ ಯೋಜನೆಯ ಲಾಭವನ್ನು ನಕಲಿ ಫಲಾನುಭವಿಗಳು ಪಡೆಯುತ್ತಿದ್ದಾರೆ ಎಂದು ಕೇಳಿಬಂದಿದೆ. ನಾಸಿಕ್ ಜಿಲ್ಲೆಯಲ್ಲಿ ಇಂತಹ 11,000 ನಕಲಿ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆರುವುದು ಪತ್ತೆಯಾಗಿವೆ. ಅವರಲ್ಲಿ ಹಲವರಿಗೆ ಜಿಲ್ಲಾಡಳಿತದ ವತಿಯಿಂದ ನೋಟಿಸ್ ನೀಡಲಾಗಿದ್ದು, ಸರಕಾರಕ್ಕೆ ಮೋಸ ಮಾಡಿ ಪಡೆದ ಹಣವನ್ನು ಹಿಂದಿರುಗಿಸಬೇಕು, ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂಬ ಸೂಚನೆ ನೀಡಲಾಗಿದೆ ಜಿಲ್ಲಾಧಿಕಾರಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಕೇಂದ್ರ ಸರಕಾರವು ದೇಶಾದ್ಯಂತ ಕೋಟ್ಯಾಂತರ ರೈತರಿಗೆ ವಾರ್ಷಿಕವಾಗಿ 6,000 ರೂ. ನೀಡಲಾಗುತ್ತದೆ. 6,000 ರೂ. ಮೊತ್ತವನ್ನು ನೇರವಾಗಿ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ಎರಡು ಕಂತುಗಳನ್ನು ಈಗಾಗಲೇ ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಆದ್ದರಿಂದ ಈಗ ಮೂರನೇ ಕಂತನ್ನು ಸರಕಾರ 2020 ರ ಡಿಸೆಂಬರ್‌ನಲ್ಲಿ ದೊರೆಯಲಿದೆ.ಇದರಲ್ಲಿ ಎಲ್ಲಾ ರೈತರಿಗೆ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಏಕೇಂದರೆ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸರಕಾರ ಕೆಲವು ಷರತ್ತುಗಳನ್ನು ವಿಧಿಸಿದೆ.
ಈ ಯೋಜನೆಯ ಲಾಭ ಪಡೆಯಲು, ರೈತರು ಜಮೀನನ್ನು ತಮ್ಮ ಹೆಸರಿನಲ್ಲಿ ಹೊಂದಿರಬೇಕು. ಒಬ್ಬ ವ್ಯಕ್ತಿಯು ಕೃಷಿ ಮಾಡುತ್ತಿದ್ದು, ಆ ಕೃಷಿ ಭೂಮಿ ಅವನ ಹೆಸರಿನಲ್ಲಿ ಇಲ್ಲದಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಇದಲ್ಲದೆ, ಒಬ್ಬ ವ್ಯಕ್ತಿಯು ಕೃಷಿಕನಾಗಿದ್ದರೂ ಸರಕಾರಿ ನೌಕರನಾಗಿದ್ದರೆ ಅಥವಾ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದರೆ. ಅಲ್ಲದೆ, ಒಬ್ಬ ವ್ಯಕ್ತಿಯು ಮಾಸಿಕ 10,000 ರೂ.ಗಳ ಪಿಂಚಣಿ ಪಡೆದರೂ ಸಹ, ಅವನು ಈ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ. ಇಂತಹ 11,000 ಸಾವಿರ ನಕಲಿ ಫಲಾನುಭವಿಗಳು ಜಿಲ್ಲೆಯಲ್ಲಿ ಕಂಡುಬಂದಿದ್ದಾರೆ. ಅಂತಹ ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.