Advertisement

ಪಿಎಂ ಕಿಸಾನ್‌ ಸಮ್ಮಾನ್‌; ಉಡುಪಿಯ 1.5 ಲಕ್ಷ ರೈತರಿಗೆ ಅನುದಾನ: ಶೋಭಾ ಕರಂದ್ಲಾಜೆ

08:01 AM Oct 14, 2022 | Team Udayavani |

ಉಡುಪಿ: ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,50,593 ರೈತರಿಗೆ 258.99 ಕೋ.ರೂ. ಕೇಂದ್ರ ಸರಕಾರದ ಅನುದಾನ ಹಾಗೂ 127.24 ಕೋ. ರೂ. ರಾಜ್ಯ ಸರಕಾರದ ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಈ ಯೋಜನೆಯ ಮುಂದಿನ ಕಂತು ಪಡೆಯಬೇಕಾದರೆ ಇ-ಕೆವೈಸಿ ಕಡ್ಡಾಯವಾಗಿರುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Advertisement

ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಈ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ. ಜಿಲ್ಲೆಯಲ್ಲಿ ಈ ಯೋಜನೆಯ ನೆರವು ಪಡೆಯುತ್ತಿರುವ ಶೇ.72 ರಷ್ಟು ಅಂದರೆ 1,09,191 ರೈತರು ಮಾತ್ರ ಇ ಕೆವೈಸಿ ಮಾಡಿಸಿಕೊಂಡಿದ್ದಾರೆ. ಶೇ. 28ರಷ್ಟು 43,365 ರೈತರು ಇ- ಕೆವೈಸಿ ಮಾಡಿಸಿಕೊಂಡಿರುವುದಿಲ್ಲ. ಆಧಾರ್‌ ಸಂಖ್ಯೆಯೊಂದಿಗೆ ಮೊಬೈಲ್‌ ಸಂಖ್ಯೆ ಜೋಡಿಸಿಕೊಂಡಿರುವ ರೈತರು https://pmkisan.gov.in ವೆಬ್‌ ಸೈಟ್‌ಗೆ ಭೇಟಿ ನೀಡಿ ಆಧಾರ್‌ ನಂಬರ್‌, ಮೊಬೈಲ್‌ ಒಟಿಪಿ ದಾಖಲಿಸಿ ಇ ಕೆವೈಸಿ ಮಾಡಿಸಿಕೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next