Advertisement

ದೇಶದಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಹೆಚ್ಚಳಕ್ಕೆ ಚಿಂತನೆ : ಸಚಿವ ಭಗವಂತ ಖೂಬಾ

12:28 PM Aug 18, 2021 | Team Udayavani |

ಕಲಬುರಗಿ: ದೇಶದಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ಜನಾಶೀರ್ವಾದ ಯಾತ್ರೆ ಅಂಗವಾಗಿ ನಗರಕ್ಕೆ ಆಗಮಿಸಿದ ಮಾತನಾಡಿದ ಅವರು, ಈಗಾಗಲೇ 8001 ಜನೌಷಧಿ ಕೇಂದ್ರಗಳಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವುದರ ಜತೆಗೆ ಎಲ್ಲ ಬಗೆಯ ಔಷಧಿಗಳಿರುವಂತೆ ಕ್ರಮ ಕೈಗೊಳ್ಳಲಾಗುವುದು. ಈಗ ಸೂಕ್ತ ಔಷಧಿಗಳು ಸಿಕ್ತಾ ಇಲ್ಲ. ಸರಿಯಾದ ಸಮುಯಕ್ಕೂ ತೆರೆಯುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಕೇಂದ್ರಗಳಿಗೆ ಡ್ಯಾಸ್ ಬೋರ್ಡ್ ತರಲು ಉದ್ದೇಶಿಸಲಾಗಿದೆ‌. ಬಹು ಮುಖ್ಯವಾಗಿ ಮನೆ- ಮನೆಗೆ ಔಷಧಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಜನೌಷಧಿ ಕೇಂದ್ರಗಳನ್ನು ಬಲವರ್ಧನೆಗೊಳಿಸಲಾಗಿತ್ತಿದೆ ಎಂದು ಸಚಿವರು ವಿವರಣೆ ನೀಡಿದರು.

ಯಾದಗಿರಿ ಜಿಲ್ಲೆಯ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿ ಫಾರ್ಮಾ ಪಾಕ್೯ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಭೂಮಿ ನೀಡಿಕೆ, ಕೆಲವು ರಿಯಾಯಿತಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ.‌ ಅದೇ ರೀತಿ ಮಂಗಳೂರಿನ ಲ್ಲಿ ಪ್ಲ್ಯಾಸ್ಟಿಕ್ ಪಾಕ್೯ ಸ್ಥಾಪಿಸಲಾಗುತ್ತಿದೆ ಎಂದು ಸಚಿವ ಖೂಬಾ ಪುನರುಚ್ಚರಿಸಿದರು.

ಇದನ್ನೂ ಓದಿ :ಇದೇ ಮೊದಲ ಬಾರಿ 56 ಸಾವಿರ ಅಂಕ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್; ಸಾರ್ವಕಾಲಿಕ ದಾಖಲೆ

ಕಡೆಚೂರಿನಲ್ಲಿ ಸ್ಥಾಪಿತವಾಗುವ ಫಾರ್ಮಾ ಪಾಕ್೯ದಿಂದ ಸುಮಾರು ಎರಡು ಲಕ್ಷ ಉದ್ಯೋಗ ಸೃಷ್ಟಿ ಯಾಗಲಿದೆ ಎಂದರು.

Advertisement

ಸೋಲಾರ ವಿದ್ಯುತ್, ವಿಂಡ್ ಹಾಗೂ ಹೈಡ್ರೋಜನ್ ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಬಹುಮುಖ್ಯವಾಗಿ ಕಲಬುರಗಿಯಲ್ಲಿ 1551 ಎಕರೆ ಭೂಮಿಯಲ್ಲಿ ಸೋಲಾರ್ ಪಾಕ್೯ ಸ್ಥಾಪಿಸಿ 500. ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮುಂದಾಗಲಾಗಿದೆ ಎಂದು ವಿವರಿಸಿದರು.

ಡಿಎಪಿಯೂ ನ್ಯಾನೋ ತಂತ್ರಜ್ಞಾನ: ಈಗಾಗಲೇ ಯೂರಿಯಾ ಉತ್ಪಾದನೆ ಯಲ್ಲಿ ನ್ಯಾನೋ ತಾಂತ್ರಿಕತೆ ಅಳವಡಿಸಲಾಗಿದ್ದು, ಡಿಎಪಿ ಗೊಬ್ಬರದ ಉತ್ಪಾದನೆ ಯಲ್ಲೂ ನ್ಯಾನೋ ತಂತ್ರಜ್ಞಾನದ ಅಳವಡಿಸಲಾಗುತ್ತಿದೆ.‌ ಈಗಾಲೇ ಪ್ರಾಯೋಗಿಕ ವಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆಯಾಗುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವ ಭಗವಂತ ಉತ್ತರ ನೀಡದೇ ಜಾರಿಕೊಂಡರು.

ಸಂಸದ ಡಾ.‌ಉಮೇಶ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್ ಸೇರಿದಂತೆ ಮುಂತಾದ ವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next