ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ 5 ವರ್ಷಗಳಲ್ಲಿ 58 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 2015ರಿಂದ ಅವರು 58 ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ 517.82ಕೋಟಿ ರೂಪಾಯಿ ಖರ್ಚಾಗಿದೆ ಎಂದೂ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ 2015ರ ಮಾರ್ಚ್‌ನಿಂದ, 2019ರವರೆಗೆ ಯಾವೆಲ್ಲ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಹಾಗೂ ಆ ಭೇಟಿಯ ಸಮಯ ದಲ್ಲಿ ಆದ ಒಪ್ಪಂದಗಳ ಬಗ್ಗೆ
ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ.ಮುರಳೀಧರನ್ ವಿವರಣೆ ನೀಡಿದ್ದಾರೆ.
ಈ ಭೇಟಿಗಳು ಭಾರತ ಮತ್ತು ಅನ್ಯ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಬಾಹ್ಯಾಕಾಶ-ರಕ್ಷಣಾ ಸಹಕಾರ ಸೇರಿ ಅನೇಕ ವಲಯಗಳಲ್ಲಿನ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸಿವೆ. ಇವೆಲ್ಲದರ ಪರಿಣಾಮವಾಗಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಭಾರತದ ರಾಷ್ಟ್ರೀಯ ಅಭಿವೃದ್ಧಿ ಗುರಿಗೂ ಕೊಡುಗೆ ಸಿಕ್ಕಿದೆ ಎನ್ನುತ್ತಾರೆ ಮುರಳೀಧರನ್.
“ಸ್ಪುಟ್ನಿಕ್’ ಪ್ರಯೋಗ ಶೀಘ್ರ ನವದೆಹಲಿ:ಕೋವಿಡ್ ಸೋಂಕು ತಡೆಗೆ ರಷ್ಯಾ ಅಭಿವೃದ್ಧಿಪಡಿಸಿರುವ “ಸ್ಪುಟ್ನಿಕ್-5’ರ ಪ್ರಯೋಗ ದೇಶದಲ್ಲಿ ಶೀಘ್ರದಲ್ಲಿಯೇ ಶುರುವಾಗಲಿದೆ. ಹೈದರಾಬಾದ್‌ನಲ್ಲಿ ಕೇಂದ್ರಕಚೇರಿ ಹೊಂದಿರುವ ಡಾ.ರೆಡ್ಡೀಸ್ ಲ್ಯಾಬೊರೇಟರಿ ಅಧಿಕಾರಿಗಳು ಈ ಅಂಶ ಖಚಿತಪಡಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಪ್ರಯೋಗ ನಡೆಯಲಿದೆ. ಒಂದರಿಂದ ಎರಡು ಸಾವಿರ ಮಂದಿ ಉತ್ಸಾಹಿಗಳು ಲಸಿಕೆ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ ಎಂದು ರೆಡ್ಡಿ ಲ್ಯಾಬೊರೇಟರೀಸ್‌ನ ಔಷಧ ವಿಭಾಗದ ಸಿಇಒ ದೀಪಕ್ ಸಪ್ರಾ ತಿಳಿಸಿದ್ದಾರೆ.
ರಷ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಮತ್ತು ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಜತೆಗೆ ದೇಶದಲ್ಲಿ300 ಮಿಲಿಯ ಡೋಸ್‌ಗಳನ್ನು ಉತ್ಪಾದಿಸುವ ಬಗ್ಗೆ ಉತ್ಪಾದಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.